Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಜಿಎಸ್‌ಬಿ ಪ್ರೀಮಿಯರ್ ಲೀಗ್: ವಿ. ಕೆ. ಪೋವಾಸ್ ತಂಡ ಪ್ರಥಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಹರಿ ಓಂ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ರಥೋತ್ಸವದ ಪ್ರಯುಕ್ತ ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಜರಗಿದ ಗೌಡ ಸಾರಸ್ವತ ಸಮಾಜ ಬಾಂಧವರ 30 ಗಜಗಳ ಸೀಮಿತ ಓವರ್‌ಗಳ ಗಂಗೊಳ್ಳಿ ಜಿಎಸ್‌ಬಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ವಿ. ಕೆ. ಪೋವಾಸ್ ತಂಡ ಪ್ರಥಮ ಸ್ಥಾನಿಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ಗಂಗೊಳ್ಳಿಯ ವಿ. ಕೆ. ಪೋವಾಸ್ ತಂಡವು ಗಂಗೊಳ್ಳಿ ಸೂಪರ್ ಆಮ್ಚಿಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಉಪಾಂತ್ಯ ಪಂದ್ಯದಲ್ಲಿ ವಿ. ಕೆ. ಪೋವಾಸ್ ತಂಡವು ರೈಸಿಂಗ್ ಸ್ಟಾರ್ ತ್ರಾಸಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರೆ ಗಂಗೊಳ್ಳಿ ಸೂಪರ್ ಆಮ್ಚಿಸ್ ತಂಡ ಅಂಕಗಳ ಆಧಾರದಲ್ಲಿ ನೇರವಾಗಿ ಫೈನಲ್ ಪ್ರವೇಶ ಪಡೆದುಕೊಂಡಿತು. ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿ. ಕೆ. ಪೋವಾಸ್ ತಂಡದ ಎಂ.ರಮೇಶ ಪೈ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಂಗೊಳ್ಳಿ ಸೂಪರ್ ಆಮ್ಚಿಸ್ ತಂಡದ ಎಂ.ನಾಗೇಶ ಪೈ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ವಿ. ಕೆ. ಪೋವಾಸ್ ತಂಡದ ಎಂ. ರಮೇಶ ಪೈ ಮತ್ತು ಉತ್ತಮ ಎಸೆತಗಾರ ಪ್ರಶಸ್ತಿಯನ್ನು ರೈಸಿಂಗ್ ಸ್ಟಾರ್ ತ್ರಾಸಿ ತಂಡದ ಎಂ.ಅನಂತ ಪೈ ಪಡೆದುಕೊಂಡರು.

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಪುರೋಹಿತರಾದ ಜಿ. ವಿಠಲದಾಸ ಭಟ್, ಗಂಗೊಳ್ಳಿಯ ಉದ್ಯಮಿಗಳಾದ ಎಂ. ವಿನೋದ ಪೈ, ಕೆ. ರಾಮನಾಥ ನಾಯಕ್, ಜಿ. ರವೀಂದ್ರ ಶೆಣೈ ಮತ್ತು ಎಂ.ವಾಮನ ಎಸ್. ಪೈ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಪಂದ್ಯಾಟ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ಡಾ.ಕಾಶೀನಾಥ ಪೈ, ಜಿ.ವೆಂಕಟೇಶ ನಾಯಕ್, ಕೆ.ಗೋಪಾಲಕೃಷ್ಣ ನಾಯಕ್ ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್ ಮತ್ತು ಹರಿ ಓಂ ಸಂಸ್ಥೆಯ ಎಂ.ನಾಗೇಶ ಪೈ ಉಪಸ್ಥಿತರಿದ್ದರು. ಜಿ. ಸುದರ್ಶನ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

 

Exit mobile version