Kundapra.com ಕುಂದಾಪ್ರ ಡಾಟ್ ಕಾಂ

ಮಾ.19ಕ್ಕೆ ಕುಂದಾಪುರದಲ್ಲಿ ಕೇಕ್‌ವಾಲ, ಈಶಾನ್ಯ ಆಹಾರೋದ್ಯಮ ಸಂಸ್ಥೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನಲ್ಲಿ ಜನ ಮನ್ನಣೆ ಗಳಿಸಿರುವ ಮಯೂರ ಸಮೂಹ ಸಂಸ್ಥೆಗಳು ಇದೀಗ ಕುಂದಾಪುರದಲ್ಲಿ ಆಹಾರೋದ್ಯಮ ಸಂಸ್ಥೆಗಳನ್ನು ಆರಂಭಿಸುತ್ತಿದ್ದು, ಮಾರ್ಚ್ 19ರಂದು ಬೆಳಿಗ್ಗೆ 10-30ಕ್ಕೆ ಶುಭಾರಂಭಗೊಳ್ಳಲಿದೆ ಎಂದು ಮಯೂರ ಗ್ರೂಫ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ಗೋಪಾಡಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಜಿ.ಎಸ್.ಆರ್ ಸ್ಕ್ವೇರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಪುರಸಭಾ ರಸ್ತೆಯಲ್ಲಿರುವ ಜಿ.ಎಸ್.ಆರ್ ಸ್ಕ್ವೇರ್ನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಕೇಕ್‌ವಾಲ ಬೇಕರಿ ಉತ್ಪನ್ನಗಳ ಮತ್ತು ಈಶಾನ್ಯ ದೇಶಿಯ ಆಹಾರ, ಐಸ್ ಕ್ರೀಮ್, ಸ್ಮೂತೀಸ್’ ಇತ್ಯಾದಿ ಖಾದ್ಯಗಳು ಕುಂದಾಪುರದ ಜನರ ಸೇವೆಗೆ ಲಭ್ಯವಾಗಲಿದೆ ಎಂದರು.

ಆಹಾರೋತ್ಪಾದನೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ, ಸ್ವಚ್ಛತೆ ಮತ್ತು ಪರಿಶುದ್ದತೆಗೆ ಮೊದಲ ಆದ್ಯತೆ, ಕೈಗೆಟಕುವ ದರ, ತೆರೆದಿಟ್ಟ ಪಾಕಶಾಲೆ, ಕಣ್ಣೆದುರೆ ಮಾಡಿಕೊಡುವ ಕೇಕ್ಗಳು ಮುಂತಾದ ವಿಶಿಷ್ಟತೆಗಳನ್ನು ಹೊಂದಿರುವ ಕೇಕ್ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ವಿಶೇಷತೆಯಾಗಿದೆ ಎಂದರು.

ಗ್ರಾಹಕರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಯೂರ ಗ್ರೂಫ್ಸ್ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡುತ್ತದೆ. ಆಹಾರೋದ್ಯಮವು ಗ್ರಾಹಕರ ಕೈಗೆಟುಕುವ ದರಕ್ಕೆ ಸಿಗಬೇಕು. ಗುಣಮಟ್ಟವನ್ನು ಪಡೆದಿರಬೇಕು, ಗ್ರಾಹಕರು ರುಚಿಯ ಸ್ವಾದವನ್ನು ಅನುಭವಿಸಬೇಕು ಎಂಬ ನಿಟ್ಟಿನಲ್ಲಿ ಹೋಟೆಲ್ ಉದ್ಯಮವನ್ನು ಸದಾ ಕ್ರಿಯಶೀಲವನ್ನಾಗಿಸಲಾಗಿದೆ. ಆಹಾರೋತ್ಪನ್ನದಲ್ಲಿ ಹೊಸತನ, ಆಹಾರ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆ, ಇದಕ್ಕಾಗಿ ಹಲವಾರು ಬಾರಿ ವಿದೇಶಗಳ ಪ್ರವಾಸವನ್ನು ಕೈಗೊಂಡು ಅಧ್ಯಯನವನ್ನು ನೆಡೆಸಿ, ಅಲ್ಲಿನ ತಂತ್ರಜ್ಞಾನವನ್ನು ಅವಶ್ಯಕತೆಗನುಗುಣವಾಗಿ ಇಲ್ಲಿ ಅಳವಡಿಕೆ ಮಾಡಲಾಗಿದೆ ಎಂದರು.

ಆಹಾರ ಪದಾರ್ಥಗಳನ್ನು ಆಳತೆ ಮತ್ತು ತೂಕದಲ್ಲಿ ವಿತರಿಸುವ ವಿಧಾನವನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಈಗಾಗಲೇ ಆಂಧ್ರ ಪ್ರದೇಶ, ಬೆಂಗಳೂರಿನಲ್ಲಿ ಮಯೂರ ಬೇಕರಿ, ಕೇನ್ ಓ ಲಾ, ಕೆಫೆ ಕಡಪ, ಮಯೂರ ಫುಡ್ ಪ್ರಾಡೆಕ್ಟ್ ಸೆಂಟರ್ ಕಿಚನ್, ಕೂಲ್ ಜಾಯಿಂಟ್, ನೇಚರ್ ಫ್ರೆಶ್ ಜ್ಯೂಸ್ ಸೆಂಟರ್, ತಾಜಾ ಮಿಠಾಯಿ, ಗುಡ್ಬ್ರೆಡ್, ನಮ್ಮೂರ ಹೋಟೆಲ್, ಪುಡ್ ಗ್ರೇಡ್ ಐಸ್ ಬ್ಯಾಂಕ್, ಕೇಕ್ ವಾಲ, ಈಶಾನ್ಯ, ಕೇಕ್ ಶಾಪ್, ರೂಫ್ ಟಾಪ್, ಪಿಜ್ಜೇರಿಯಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಬೆಂಗಳೂರಿನಲ್ಲಿ ದಿನವೊಂದಕ್ಕೆ ಐವತ್ತು ಸಾವಿರ ಜನ ಗ್ರಾಹಕರಿಗೆ ಸೇವೆ ನೀಡಲಾಗುತ್ತದೆ.

ಮಾ.19ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಎ.ಜಿ ಕೊಡ್ಗಿ, ಕುಂದಾಪುರ ಪುರಸಭೆ ಅಧ್ಯಕ್ಷರಾದ ವೀಣಾ ಭಾಸ್ಕರ ಮೆಂಡನ್, ಕುಂದಾಪುರ ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಕುಂದಾಪುರ ವಿನಯ ಆಸ್ಪತ್ರೆಯ ಡಾ|ಎಸ್. ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದವರು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಕೇಕ್ವಾಲ ಸಿಇಓ ಕೆ. ಎಸ್. ಸುಹಾಸ್ ಉಪಧ್ಯಾಯ ಉಪಸ್ಥಿತರಿದ್ದರು.

Exit mobile version