Kundapra.com ಕುಂದಾಪ್ರ ಡಾಟ್ ಕಾಂ

ಕಾಯಕ ಚೂಡಾಮಣಿ ರತ್ನ ಪ್ರಶಸ್ತಿಗೆ ಭರತ್‌ಕುಮಾರ್ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೀದರ್ ಜಿಲ್ಲೆಯ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ಹಾಗೂ ಮಂದಾರ ಕಲಾ ವೇದಿಕೆ ಕೊಡಮಾಡುವ 2021ನೇ ಸಾಲಿನ ಕಾಯಕ ಚೂಡಾಮಣಿ ರತ್ನ ಪ್ರಶಸ್ತಿಗೆ ಕೊಲ್ಲೂರಿನ ಮಾವಿನಕಾರು ಗ್ರಾಮದ ಭರತ್‌ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯ ಹಲವಾರು ಊರುಗಳಲ್ಲಿ ನಿರ್ಗತಿಕರ, ವಿಶೇಷಚೇತನರ ಆಶ್ರಮಗಳಿಗೆ ದುಡಿಮೆಯ ಹಣದಲ್ಲಿ ಊಟೋಪಚಾರ, ಬಟ್ಟೆ ಔಷಧ ಹಾಗೂ ಕೆಲವೊಮ್ಮೆ ಆಸ್ಪತ್ರೆ ಖರ್ಚನ್ನೂ ಭರಿಸಿದ್ದಾರೆ. ಈಗಲೂ ಹಲವಾರು ನಿರ್ಗತಿಕರು, ವೃದ್ಧರು ಇವರ ಆಶ್ರಯದಲ್ಲಿದ್ದಾರೆ.

ಫಲಾಪೇಕ್ಷೆಯಿಲ್ಲದ ಇವರ ಈ ಸಮಾಜಸೇವೆ ಗುರುತಿಸಿ ಈ ಪ್ರಶಸ್ತಿಯನ್ನು ಬೀದರ್‌ನಲ್ಲಿ ಭಾನುವಾರ ನಡೆಯುವ ಸಮಾರಂಭದಲ್ಲಿ ಪ್ರಧಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಜಿ. ದೇಶಪಾಂಡೆ ತಿಳಿಸಿದ್ದಾರೆ.

Exit mobile version