Kundapra.com ಕುಂದಾಪ್ರ ಡಾಟ್ ಕಾಂ

ರೋಜರಿ ಕ್ರೆಡಿಟ್ ಕೋ – ಆಪರೇಟಿವ್: ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ನ ಬೈಂದೂರು ಶಾಖೆಗೆ ಯಡ್ತರೆಯಲ್ಲಿರುವ ಸ್ವಂತ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಬೈಂದೂರು ಚರ್ಚ್ ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಈಚೆಗೆ ಶಿಲಾನ್ಯಾಸ ಮಾಡಿದರು.

ನೂತನ ಕಟ್ಟಡ ನಿರ್ಮಾಣವಾದ ಮೇಲೆ ಬಾಡಿಗೆ ಕಟ್ಟಡದಲ್ಲಿರುವ ಶಾಖೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿ ಅಲ್ಮೇಡಾ ತಿಳಿಸಿದರು. ಉಪಾಧ್ಯಕ್ಷ ಕಿರಣ್ ಲೋಬೊ, ನಿರ್ದೇಶಕಿ ಶಾಂತಿ ಪಿರೇರಾ, ಫಿಲಿಪ್ ಡಿಕೊಸ್ತಾ, ವಿಲ್ಫ್ರೆಡ್ ಮಿನೇಜೆಸ್, ಪ್ರಕಾಶ ಲೋಬೊ, ಡಯಾನಾ ಡಿ. ಆಲ್ಮೇಡಾ, ಶಾಂತಿ ಕರ್ವಾಲ್ಲೊ, ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜ, ಎಇಒ ಮೇಬಲ್ ಪುರ್ಟಾಡೊ, ಬೈಂದೂರು ಶಾಖಾ ಪ್ರಬಂಧಕಿ ವಿನಿತಾ ಡಿಸೋಜ, ಗುತ್ತಿಗೆದಾರ ಕ್ಲೆಮೆಂಟ್ ರೋಡ್ರಿಗಸ್, ಎಂಜಿನಿಯರ್ ರವೀಂದ್ರ ಕಾವೇರಿ ಇದ್ದರು.

 

Exit mobile version