Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಕಥೊಲಿಕ್ ಸ್ತ್ರೀ ಸಂಘ: ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ರೋಜರಿ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ 21-22 ಅವಧಿಯ ಚುನಾವಣೆಯು ಇತ್ತಿಚೆಗೆ ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷೆಯಾಗಿ ಶಾಂತಿ ಕರ್ವಾಲ್ಲೊ, ಉಪಾಧ್ಯೆಕ್ಷೆಯಾಗಿ ಜೂಲಿಯಾನ ಮಿನೇಜಸ್, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್. ಕೋಶಾಧಿಕಾರಿಯಾಗಿ ವಿಕ್ಟೋರಿಯಾ ಡಿಸೋಜಾ, ವಾರಾಡೊ ಪ್ರತಿನಿಧಿಯಾಗಿ ಶಾಂತಿ ಬಾರೆಟ್ಟೊ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ, ಚುನಾಯಿತರಾದರು.

ಚನಾವಣ ಪ್ರಕ್ರಿಯೆಯನ್ನು ವಲಯ ಸ್ತ್ರೀ ಸಂಘಟನೇಯ ಅಧ್ಯಕ್ಷೆ ನೋರಾ ಡಿಸೋಜಾ, ಕೋಶಾಧಿಕಾರಿ ಕೆರೋಲ್ ಗೊನ್ಸಾಲ್ವಿಸ್ ನಡೆಸಿಕೊಟ್ಟರು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ಮತ್ತು ಸಚೇತಕಿ ಸಿಸ್ಟರ್ ಆಶಾ ಶುಭ ಕೋರಿದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಜೂಲಿಯಾನ ಮಿನೇಜಸ್ ವಂದಿಸಿದರು.

Exit mobile version