ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಚ್. ಎಮ್. ಎಮ್. ಆಂಗ್ಲ ಪ್ರಾಥಮಿಕ ಶಾಲೆ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ವಿಶ್ವ ಕರಾಟೆ ಫೆಡರೇಶನ್ ಐದನೇ ಡಾನ್ ಬ್ಲ್ಯಾಕ್ ಬೆಲ್ಟ್ ಶಿಹಾನ್ ಕೀರ್ತಿ ಜಿ. ಕೆ. ಮತ್ತು ತಂಡದವರಿಂದ ಸ್ವಆತ್ಮ ರಕ್ಷಣೆ ಕಲೆಯ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ನ್ಯೂ ಮೆಡಿಕಲ್ ಸೆಂಟರ್, ಕುಂದಾಪುರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸರ್ವತ್ ಪರ್ವೀನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲೆ ಶುಭಾ ಕೆ. ಎನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಆಚಾರ್, ಪ್ರೌಢ ಶಾಲಾ ಸಂಯೋಜಕರಾದ ಚಂದ್ರಶೇಖರ್, ಗೈಡ್ಸ್ ಶಿಕ್ಷಕಿ ರೇಖಾ ಕೆ. ಯು. ಉಪಸ್ಥಿತರಿದ್ದರು. ಕಂಪ್ಯೂಟ್ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.