Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅವರಿಗೆ ನುಡಿನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬರಿ ಪದಕ್ಕೆ ಪದ ಸೇರಿಸಿ ಹಾಡು ಕಟ್ಟದೆ, ಒಂದೊಂದು ಅಕ್ಷರವನ್ನೂ ತುಂಬು ಅನುಭವಿಸಿ ಭಾವಗಳನ್ನೇ ಎದೆಗಿಳಿಸಿದ ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಗೀತೆಗಳು ಬದುಕಿನ ಗೀತೆಗಳು ಎಂದು ಸಾಂಸ್ಕೃತಿಕ ಚಿಂತಕ ಮುಸ್ತಾಕ್ ಹೆನ್ನಾಬೈಲು ಹೇಳಿದರು.

ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ವೇದಿಕೆ ಆಯೋಜಿಸಿದ ಭಾವಭೃಂಗದ ಶೃಂಗ ಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕಿಯಾದ ದಿವ್ಯಾ ಶ್ರೀಧರ್ ರಾವ್ ಬೆಂಗಳೂರು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಬದುಕಿನ ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಸಾಹಿತ್ಯ ವೇದಿಕೆಯ ಸಂಯೋಜಕ, ಕನ್ನಡ ಉಪನ್ಯಾಸಕರಾದ ಸುಕುಮಾರ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಸಂಸ್ಕೃತ ಉಪನ್ಯಾಸಕಿಯಾದ ಸುದಕ್ಷಿಣಾ ಎ.ಎಸ್. ಅತಿಥಿಗಳನ್ನು ಪರಿಚಯಿಸಿದರು. ಸಾಹಿತ್ಯ ವೇದಿಕೆಯ ಸಹ ಸಂಯೋಜಕಿ ಆಶಾ ಶೆಟ್ಟಿ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ನಿರೂಪಿಸಿದರು.

ವಿದ್ಯಾರ್ಥಿನಿಯರು ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಗಳನ್ನು ಪ್ರಸ್ತುತಿ ಪಡಿಸಿದರು. ಸಾಹಿತ್ಯ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳಾದ ದರ್ಶನ್ ಭಂಡಾರಿ ಹಾಗೂ ನೇತ್ರಾವತಿ ಉಪಸ್ಥಿತರಿದ್ದರು.

Exit mobile version