Kundapra.com ಕುಂದಾಪ್ರ ಡಾಟ್ ಕಾಂ

ಸ್ವಾತಂತ್ರ್ಯೋತ್ಸವ: ಕೋಣಿ ಮಾತಾ ಮೊಂಟೆಸ್ಸೋರಿ

ಕುಂದಾಪುರ: ಸಮೀಪದ ಕೋಣಿ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ಚಿಣ್ಣರು ೬೯ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಅಗ್ನಿ ಶಾಮಕ ಠಾಣೆ, ಕುಂದಾಪುರದ ಗ್ರಂಥಾಲಯಕ್ಕೆ ಭೇಟಿ ನೀಡಿದ ಚಿಣ್ಣರು ಅಲ್ಲಿನ ಸಿಬ್ಬಂದಿ ಹಾಗೂ ನಾಗರಿಕರಿಗೆ ಶುಭಹಾರೈಸಿ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಅಗ್ನಿ ಶಾಮಕ ಠಾಣಾಧಿಕಾರಿ ಭರತ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಪುತ್ಥಳಿಗೆ ಲೆಕ್ಕ ಪರಿಶೋಧಕ ರಾಜೇಶ್ ಶೆಟ್ಟಿ ಹಾರಾರ್ಪಣೆ ಮಾಡಿದರು. ಹಾಗೂ ಡಾ. ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಕೋಣಿ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹಾರಾರ್ಪಣೆ ಮಾಡಿದರು.

ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಸುಮಿತ್ರಾ, ಗೀತಾ ಶೆಟ್ಟಿ, ಪೋಷಕರಾದ ಭರತ್ ಶೆಟ್ಟಿ, ಸತೀಶ್ ಪೈ, ಕೃಷ್ಣ ಪೂಜಾರಿ, ಗೋಪಾಲ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

Exit mobile version