Kundapra.com ಕುಂದಾಪ್ರ ಡಾಟ್ ಕಾಂ

ಚೆಸ್ ಪಂದ್ಯಾಟ: ಯಶಸ್ವಿ ಬಾಬು ಪೂಜಾರಿಗೆ ಪ್ರಥಮ ಸ್ಥಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
 ಕುಂದಾಪುರ: ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕುದುರೆಮುಖ ಟ್ರೋಫಿಯ 15ರ ವಯೋಮಿತಿಯ ವಿಭಾಗದಲ್ಲಿ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಯಶಸ್ವಿ ಬಾಬು ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಈಕೆ ಕುಂದಾಪುರದ ಸಿದ್ದಿವಿನಾಯಕ ಚೆಸ್ ಅಕಾಡೆಮಿಯಲ್ಲಿ ಚದುರಂಗ ತರಬೇತಿ ಪಡೆಯುತ್ತಿದ್ದಾಳೆ ಇವಳ ಸಾಧನೆಗೆ ಶುಭದಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version