Kundapra.com ಕುಂದಾಪ್ರ ಡಾಟ್ ಕಾಂ

ಯುವ ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ

ಸುಸಜ್ಜಿತ, ಐಷಾರಾಮಿ ಹೋಟೇಲ್ ಯುವ ಮೆರಿಡಿಯನ್ ಬೇ ರಿಸಾರ್ಟ್ ಇದು ದೇಶದ ಕೆಲವೇ ಕೆಲವು ಸುಸಜ್ಜಿತ, ಐಷಾರಾಮಿ ಹೋಟೆಲ್‌ಗಳ ಪೈಕಿ ಒಂದಾಗಿದೆ. ಸುಸಜ್ಜಿತ ಮತ್ತು ಆಧುನಿಕ ವಿಸ್ತಾರವಾದ ಹಸಿರು ರಾಶಿಗಳ ನಡುವೆ ಉತ್ತಮ ಸೌಲಭ್ಯಗಳನ್ನು ಹಾಗೂ ಸರ್ವಶ್ರೇಷ್ಠ ಸೇವೆಗಳನ್ನು, ಅತ್ಯಂತ ವಿಶೇಷ ಮತ್ತು ವೈಯಕ್ತಿಕಗೊಳಿಸಿದ ಅನುಭವವನ್ನು ನೀಡುವ ಆದರ್ಶ ಮನೆಯಾಗಲಿದೆ.

ವಿಶೇಷವೆಂದರೆ ಯುವ ಮೆರಿಡಿಯನ್ ಬೇ ರೆಸಾರ್ಟ್‌ನಲ್ಲಿ ಅತಿಥಿಗಳಿಗಾಗಿ ತಮ್ಮ ಸೇವೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಸುಪೀರಿಯರ್ ರೂಂ, ಕ್ಲಬ್ ರೂಂ, ಡಿಲಕ್ಸ್ ರೂಂ ಹಾಗೂ ಸೂಟ್ ರೂಂ. ಎಂದು ನಾಲ್ಕು ವಿಧದ ವಿಶ್ರಾಂತಿ ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸುಪೀರಿಯರ್ ರೂಂ: ವಿಶೇಷ ಅತಿಥಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳಿದ್ದು, ಪ್ರತೀ ಕೋಣೆಯೂ ೨೭೫ ಚದರ ಅಡಿಗಳನ್ನು ಹೊಂದಿದೆ. ದೂಮಪಾನ ನಿಷೇಧಿತ ಹವಾನಿಯಂತ್ರಿತ ಕೊಠಡಿಗಳಾಗಿದ್ದು, ವಾರ್ತಾ ಪತ್ರಿಕೆಗಳ ಸೌಲಭ್ಯ, ಫಿಟ್‌ನೆಸ್ ಸೆಂಟರ್, ಈಜು ಕೊಳ ಸೌಕರ್ಯ, ಉನ್ನತ ಹಾಸಿಗೆಗಳು, ವಿಶೇಷ ಸ್ನಾನಗೃಹ, ಸೌಂದರ್ಯ ಸಾಧನಗಳು, ಸುರಕ್ಷಿತ ಲಾಕರ್ ವ್ಯವಸ್ಥೆ, ಅಂತರ್ಜಾಲ ಸೌಕರ್ಯ, ಓದು ಬರೆಯಲು ವ್ಯವಸ್ಥೆ, ರಿಮೋಟ್ ಟಿವಿ ಚಾನೆಲ್‌ಗಳು, ಅಂತರಾಷ್ಟ್ರೀಯ ಮಟ್ಟದ ಅತಿಥಿಗಳ ಆಯ್ಕೆಯ ಚಾನೆಲ್‌ಗಳ ಸಂಪರ್ಕಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.

ಕ್ಲಬ್ ರೂಂ: ಅಕ್ಕ ಪಕ್ಕದ ಎರಡು ಕೊಠಡಿಗಳನ್ನು ಅಗತ್ಯ ಬಿದ್ದಲ್ಲಿ ಒಟ್ಟು ಸೇರಿಸುವ ಮೂಲಕ ಎರಡಕ್ಕಿಂತ ಹೆಚ್ಚು ಜನರ ಕುಟುಂಬವನ್ನು ಒಂದು ಮನೆಯಂತೆ ವಿಶ್ರಾಂತಿ ಪಡೆಯಲು ಯೋಜಿಸಲಾದ ಒಂದು ವಿಶೇಷ ವ್ಯವಸ್ಥೆಯೇ ಈ ಕ್ಲಬ್ ರೂಂ. ಕುಟುಂಬ ಮತ್ತು ಸ್ನೇಹಿತರಿಗೆ ಜೊತೆಯಾಗಿರಲು ಇದೊಂದು ಮಾದರಿ ಕಲ್ಪನೆ. ಮುನ್ನೂರು ಚದರ ಅಡಿಗಳಿರುವ ಈ ಕೋಣೆಯಲ್ಲಿಯೂ ಹವಾನಿಯಂತ್ರಿತ ಸೌಲಭ್ಯಗಳಿದ್ದು, ಪ್ರತೀ ಕೋಣೆಯಲ್ಲಿ ಇಬ್ಬರು ಉಳಿದುಕೊಳ್ಳಬಹುದಾದ ಎರಡು ಅವಳಿ ಹಾಸಿಗೆ ಇದರ ವಿಶೇಷ. ಉಳಿದಂತೆ ಸುಪೀರಿಯರ್ ರೂಂ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ.

ಡಿಲಕ್ಸ್ ರೂಂ: ಸರಳತೆ, ಸೊಬಗು ಮತ್ತು ಗಮನ ಸೆಳೆಯುವ ವಾದ್ಯವೃಂದದ ಸಂಯೋಜನೆ ಈ ಡಿಲಕ್ಸ್ ಕೊಠಡಿ ವಿಶೇಷತೆ. ಅತ್ಯುತ್ತಮ ಆಧುನಿಕ ಕಲೆಗಾರಿಕೆಯನ್ನು ಇಲ್ಲಿನ ಕೋಣೆಗಳು ಪ್ರದರ್ಶಿಸುತ್ತವೆ. ಇಲ್ಲಿಯ ವಿಶ್ರಾಂತಿ ಅದೊಂದು ಮರೆಯಲಾಗದ ಕ್ಷಣಗಳನ್ನು ನೀಡಬಲ್ಲುದು. ೩೫೦ ಚದರ ಅಡಿಗಳ ವಿಸ್ತೀರ್ಣದ ಈ ಕೊಠಡಿಗಳು ಉಳಿದಂತೆ ಸುಪೀರಿಯರ್ ಸೌಲಭ್ಯಗಳನ್ನು ಹೊಂದಿವೆ.

ಸೂಟ್ ರೂಂ: ಆಧುನಿಕ ಶೈಲಿಯ ಮಿಶ್ರಣದೊಂದಿಗೆ ಶಾಸ್ತ್ರೀಯ ಸೌಕರ್ಯಗಳನ್ನು ಆನಂದಿಸಲು ಸೂಟ್ ರೂಂ ವಿಶೇಷವಾಗಿ ಸಜ್ಜುಗೊಂಡಿದೆ. ಸುಮಾರು ೭೦೦ ಚದರ ಅಡಿ ವಿಶಾಲತೆ ಹೊಂದಿರುವ ಈ ಸೂಟ್ ರೂಂನಲ್ಲಿ ಅತಿಥಿಗಳು ಅದ್ಧೂರಿ ಸಮೃದ್ಧಿಯನ್ನು ಅನುಭವಿಸುವುದರಲ್ಲಿ ಎರಡು ಮಾತಿಲ್ಲ. ವಿಶಾಲವಾದ ಕುಳಿತುಕೊಳ್ಳುವ ಕೊಠಡಿಯ ಸಂಯೋಜನೇ ಒಂದು ಅದ್ಭುತ ಪರಿಕಲ್ಪನೆ. ಸೂಕ್ಷ್ಮ ಬಣ್ಣಗಳ ಮತ್ತು ಮೃದುವಾದ ಕುಳಿತುಕೊಳ್ಳುವ ಪೀಠಪಕರಣಗಳು ಸೂಟ್ ರೂಂ ವಿಶೇಷ. ಉಳಿದಂತೆ ಡಿಲಕ್ಸ್ ರೂಂನಲ್ಲಿರುವ ಎಲ್ಲಾ ಸೌಲಭ್ಯಗಳೂ ಇಲ್ಲಿ ಲಭ್ಯ.

ರುಚಿಕರ ಭೋಜನ ಮತ್ತು ಉಪಾಹಾರ ಸೌಲಭ್ಯ: ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ಉತ್ತಮ ಊಟದ ಆಯ್ಕೆಗಳನ್ನು ಒದಗಿಸುತ್ತದೆ. ಇಲ್ಲಿಯ ಪಾಕಶಾಸ್ತ್ರ ಒಂದು ಅಭಿವ್ಯಕ್ತಿಯ ಕಂಪು. ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವತ್ತ ವಿಶೇಷ ಮುತುವರ್ಜಿ ವಹಿಸಲಾಗಿದ್ದು, ಅಂತಾರ್ರಾಷ್ಟ್ರೀಯ ಮಟ್ಟದ ರುಚಿಯನ್ನು ಇಲ್ಲಿನ ಎಲ್ಲಾ ಪ್ರಾಕಾರದ ಅಡುಗೆಯಲ್ಲಿಯೂ ಕಾಪಾಡಿಕೊಳ್ಳಲಾಗಿದೆ. ಸಾಂಪ್ರದಾಯಿಕ ಪಾಕ ಪದ್ಧತಿಗೇ ಆದ್ಯತೆ ನೀಡಿ, ಜಾಗತಿಕ ಮಟ್ಟದ ನುರಿತ ಪಾಕ ತಜ್ಞರು ಸಿದ್ಧಪಡಿಸುವ ಆಹಾರ ಪದಾರ್ಥಗಳು ವಿಶ್ವಮಟ್ಟದಲ್ಲಿ ತಮ್ಮ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಸಮರ್ಥವಾಗಿವೆ.

ಮೆರಿಡಿಯನ್ ಬೇ ಯ ಎರಡನೇ ಮಹಡಿಯಲ್ಲಿ ಕೆಫೆ ಅಟ್ಲಾಂಟಿಸ್ ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ಇದೆ. ಇದೊಂದು ಅವಿಸ್ಮರಣೀಯ ಕ್ಷಣಗಳನ್ನು ನೀಡುವಂತಿದೆ. ಇಲ್ಲಿ ಕುಳಿತ ಅತಿಥಿಗಳಿಗೆ ಈಜುಕೊಳದಿಂದ ಹಿಡಿದು ಕೊಡಚಾದ್ರಿಯ ವರೆಗಿನ ಅಪೂರ್ವ ದೃಶ್ಯಗಳನ್ನು ಮನತುಂಬಿಸಿಕೊಳ್ಳುವ ಸೌಭಾಗ್ಯ ಲಭಿಸುತ್ತದೆ. ಕರಾವಳಿ ಪ್ರದೇಶದ ಮಸಾಲಾ ಪದಾರ್ಥಗಳು, ಭಾರತೀಯ ತಿನಿಸುಗಳು, ಶುದ್ಧ ಗ್ರಾಮೀಣ ಪಾಕಪದ್ಧತಿಯ ಪ್ರಯೋಗ, ಉತ್ತಮ ಗುಣಮಟ್ಟದ ಆಹಾರ ಮತ್ತು ಖಾದ್ಯ ಪದಾರ್ಥಗಳು ರೋಮಾಂಚಕ ಕಡಲತಡಿಯ ಪಾಕಶಾಲೆಯ ಹಿರಿಮೆಯನ್ನು ಪ್ರತಿನಿಧಿಸುತ್ತದೆ.

ಗ್ರಾವಿಟು: ಕೇವಲ ಊಟೋಪಚಾರ ಮತ್ತು ವಿಶ್ರಾಂತಿಗಷ್ಟೇ ಮೆರಿಡಿಯನ್ ಬೇ ರೆಸಾರ್ಟ್ ಗಮನೀಕರಿಸಿಲ್ಲ. ಬದಲಾಗಿ ಕ್ರೀಡೆ, ಸ್ಪಂದನ ಸಂಗೀತ, ಆಂತರಿಕ ಡಿಜೆ ಮೂಲಕ ಅತಿಥಿಗಳ ಮನ ಸಂತೃಪ್ತಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಲಾಬಿ ಲಾಂಜ್: ಸೊಗಸಾದ ತಾಜಾ ಹಣ್ಣಿನ ರಸಗಳು, ಸಾರಸಂಗ್ರಹಿ ಕಾಕ್ಟೈಲ್, ಕಾಫಿಗಳನ್ನು ಮತ್ತು ಸಡಿಲ ಚಹಾಗಳ ಜೊತೆಜೊತೆಗೇ ಸಿಹಿತಿಂಡಿಗಳ ಒಂದು ಸಂತೋಷಕರ ಆಯ್ಕೆಯನ್ನು ಒದಗಿಸುತ್ತದೆ. ನುರಿತ ಅಡುಗೆ ಪಾಕಶಾಸ್ತ್ರಜ್ಞರು ಸಿದ್ದಗೊಳಿಸಿದ ಸಿಹಿ ತಿನಿಸುಗಳು ಮೆರಿಡಿಯನ್ ಬೇ ಯ ಮರೆಯಲಾರದ ನೆನಪುಗಳನ್ನು ಅತಿಥಿಗಳಲ್ಲಿ ಶಾಶ್ವತವಾಗಿ ಉಳಿಸುತ್ತವೆ. ಅಲ್ಲದೇ ಅತಿಥಿಗಳಿಗೆ ವಿಶ್ರಾಂತಿ ಪಡೆಯಲು ಮತ್ತು ಅಂತರ್ಜಾಲ ಜಾಲಾಡಲು ಪ್ರತ್ಯೇಕ ಕೋಣೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್‌ರೂಂ ಡೈನಿಂಗ್: ಭಾರತೀಯ ಮತ್ತು ಅಂತರಾಷ್ಟ್ರೀಯ ತಿನಿಸುಗಳ ಮೆನು ಹೊಂದಿರುವ ಇನ್ ರೂಂ ಡೈನಿಂಗ್ ಸೌಲಭ್ಯದಲ್ಲಿ ವ್ಯಾಪಕ ಆಯ್ಕೆ ಹೊಂದಿದೆ. ಅಲ್ಲದೇ ಗಡಿಯಾರ ಪಾಕಶಾಲಾ ಸೌಲಭ್ಯವೂ ಇಲ್ಲಿದ್ದು, ನಿಮ್ಮ ಆಯ್ಕೆಯ ಆಹಾರ ದೊರಕದಿದ್ದಲ್ಲಿ ಪಾಕ ಶಾಸ್ತ್ರಜ್ಞರ ಜೊತೆಗೆ ಮಾತನಾಡಿ ಎಕ್ಸ್‌ಪ್ರೆಸ್ ಉಪಾಹಾರ ವ್ಯವಸ್ಥೆ ಪಡೆಯಬಹುದಾಗಿದೆ.

ಬೇಕರಿ: ಬ್ರೌನಿಗಳು ಮೆರಿಡಿಯನ್ ಬೇ ನಮ್ಮ ಅತಿಥಿಗಳಿಗೆ ಸಿಹಿ ಭಕ್ಷ್ಯದ ಔತಣ ನೀಡುತ್ತವೆ. ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ನಲ್ಲಿ ಆಹ್ವಾನಕ್ಕೆ ಆಹಾರ ಮತ್ತು ಪಾನೀಯಗಳು ವ್ಯಾಪಕ ಪೂರಕವಾಗಿ ಸಂಪೂರ್ಣವಾಗಿ ರುಚಿಯ ಹಸಿವನ್ನು ಮತ್ತು ಸಿಹಿ ತಿನಿಸುಗಳಲ್ಲಿ ಉತ್ಪಾದಿಸುತ್ತದೆ. ಇದು ವಿಶೇಷ ನಿರ್ಮಿತ ಅಥವಾ ಆದೇಶ ಜನ್ಮದಿನ ಕೇಕ್ ಅಥವಾ ತ್ವರಿತ ಬೈಟ್‌ಗಳನ್ನು ಪಡೆಯಲು ಸಹಾಕಾರಿಯಾಗುತ್ತವೆ.

ಸಭೆಗಳು ಮತ್ತು ಸಮ್ಮೇಳನಗಳಿಗೆ ವಿಶೇಷ ಸೌಲಭ್ಯ: ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ, ಹಾಗೂ ಯುವ ಮೆರಿಡಿಯನ್ ಕನ್ವೆನ್‌ಷನ್ ಹಾಲ್‌ಗಳು ಸುಂದರ ಸಭೆಗಳು, ವಿವಾಹಗಳು, ಸಮಾವೇಶಗಳು ಮತ್ತು ಖಾಸಗಿ ಚಟುವಟಿಕೆಗಳಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುವ ಒಳಾಂಗಣ ಮತ್ತು ಹೊರಾಂಗಣ ವ್ಯವಸ್ಥೆಯಿದೆ. ರೆಸಾರ್ಟ್ ಹಾಗೂ ಕನ್ವೆನ್‌ಷನ್ ಹಾಲ್‌ಗಳು ಉತ್ತಮ ಗುಣಮಟ್ಟದ ಒಳಾಂಗಣ ಮತ್ತು ವಿಸ್ತಾರವಾದ ಹೊರಾಂಗಣದ ಸ್ಥಳದ ಜೊತಗೆ ಔತಣಕೂಟಕ್ಕೆ ಯೋಗ್ಯ ಅವಕಾಶ ಕಲ್ಪಿಸುತ್ತದೆ. ೩೦,೦೦೦ ಚದರ ಅಡಿ ವಿಸ್ತೀರ್ಣ ಹೊಂದಿರುವ ಭೋಜನ ಸ್ಥಳವಿದೆ.

ಪ್ರಯಾಣ ಡೆಸ್ಕ್ ಬಳಸಿ ಕುಂದಾಪುರ ಸಿಟಿ ಅನ್ವೇಷಿಸಿ: ನೀವು ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ನಲ್ಲಿ ಟ್ರಾವೆಲ್ ಡೆಸ್ಕ್ ನಿಮ್ಮ ಪ್ರವಾಸಿ ಪ್ರಯಾಣಕ್ಕೆ ಸಹಾಯ ಮಾಡುತ್ತದೆ. ಕ್ಲಪ್ತ ಸಮಯದಲ್ಲಿ ನಿಮ್ಮ ಅನುಕೂಲಕ್ಕಾಗಿ ನಿಮ್ಮ ಆಯ್ಕೆಯ ಸ್ಥಳಗಳಿಗೆ ನಿಮ್ಮನ್ನು ಕರೆದೊಯ್ಯುವ ವ್ಯವಸ್ಥೆಯಿದೆ. ಕುಂದಾಪುರ ಮತ್ತು ಆಸಕ್ತಿಯ ಹತ್ತಿರದ ಸ್ಥಳಗಳಿಗೆ ಹಾಗೂ ವಿವಿಧ ಭಾಗಗಳಿಗೆ ಮಾರ್ಗದರ್ಶಿ ಪ್ರವಾಸಗಳ ವ್ಯವಸ್ಥೆ ಲಭ್ಯವಿದೆ. ವಿಮಾನಯಾನ ಮತ್ತು ರೈಲು ಮೀಸಲಾತಿಗಳಿಗೆ ಅಗತ್ಯ ಬೆಂಬಲವನ್ನು ಒದಗಿಸುತ್ತದೆ.

ಸ್ವಾಸ್ಥ್ಯ ಮೆರಿಡಿಯನ್ ಆರೋಗ್ಯ ಕೊಡುಗೆಗಳು: ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ಅನುಭವಿ ನೈಸರ್ಗಿಕ ಚಿಕಿತ್ಸಾ ತಜ್ಞ ಡಾ ಮೊಹಮ್ಮದ್ ರಫಿಕ್ ಮತ್ತು ಅರ್ಹ ತಂಡದ ಮಾರ್ಗದರ್ಶನದಲ್ಲಿ ಸ್ವಾಸ್ಥ್ಯ ಮೆರಿಡಿಯನ್ ನೈಸರ್ಗಿಕ ಚಿಕಿತ್ಸಾ ಯೋಗ ಸಂಸ್ಥೆ ಸಹಯೋಗದೊಂದಿಗೆ ಆರೋಗ್ಯ ಪ್ಯಾಕೇಜುಗಳನ್ನು ಒದಗಿಸುತ್ತದೆ. ಎಲ್ಲಾ ಚಿಕಿತ್ಸಾ ಮತ್ತು ಸಮಾಲೋಚನೆಗಳನ್ನು ಮೆರಿಡಿಯನ್ ಬೇ ರೆಸಾರ್ಟಿನಿಂದ ೩ ಕಿಮೀ ದೂರದಲ್ಲಿರುವ ಕೋಟೇಶ್ವರದ ಸ್ವಾಸ್ಥ್ಯ ಮೆರಿಡಿಯನ್ ಆವರಣದಲ್ಲಿ ನಡೆಸಲಾಗುವುದು. ಇದೊಂದು ನೈಸರ್ಗಿಕ ಚಿಕಿತ್ಸಾ ಕೇಂದ್ರವಾಗಿದ್ದು, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳ ಮೂಲಕ ಶಸ್ತ್ರಚಿಕಿತ್ಸೆ ಮತ್ತು ಔಷಧಗಳ ಬಳಕೆಯಿಲ್ಲದೆ ಕಾಯಿಲೆಗಳನ್ನು ಗುಣಪಡಿಸುವ ವಿಧಾನ ಇಲ್ಲಿಯ ವೈಶಿಷ್ಟ್ಯ. ಇಲ್ಲಿಯ ನೈಸರ್ಗಿಕ ಚಿಕಿತ್ಸೆಗಳು ಉತ್ತಮ ಶ್ರೇಣಿಯನ್ನು ಒದಗಿಸುವಂತಿದ್ದು, ಆಹಾರ ಮತ್ತು ಜೀವನಶೈಲಿಗಳ ಬಗ್ಗೆ ಸಮಾಲೋಚನೆ ನಡೆಸುವ ಮೂಲಕ ಚಿಕಿತ್ಸೆಗೊಳಪಟ್ಟ ವ್ಯಕ್ತಿಯ ಆಂತರಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಯೋಗದ ಮೂಲಕ ದೈಹಿಕ ವ್ಯಾಯಾಮವನ್ನೂ ಮೀರಿ ಧ್ಯಾನಸ್ಥ ಸ್ಥಿತಿಯನ್ನು ಅರಿತುಕೊಳ್ಳುವ, ಆಧ್ಯಾತ್ಮಕತೆ ತಿರುಳಿನೊಂದಿಗೆ ತನ್ನೊಳಗಿನ ಸಮಸ್ಯೆಗಳನ್ನು ಅರಿತುಕೊಳ್ಳುವ ಮತ್ತು ಪರಿಹಾರ ಕಂಡುಕೊಳ್ಳುವ ಸ್ವಕ್ರಿಯಾ ಪದ್ಧತಿಯನ್ನು ಕಲಿಸುತ್ತದೆ. ವಿವಿಧ ಆಸನಗಳ, ಉಸಿರಾಟದ ವ್ಯಾಯಾಮ ಹಾಗೂ ಪ್ರಾಣಾಯಾಮಗಳ ಮೂಲಕ ಇಲ್ಲಿನ ಚಿಕಿತ್ಸಾ ಕ್ರಮಗಳು ನಡೆಯುತ್ತವೆ. ಸೌಕರ್ಯಕ್ಕೆ ಹೋಟೆಲ್ ಸಾರಿಗೆ ವ್ಯವಸ್ಥೆಯಿರುತ್ತದೆ.

ಸ್ವಾಪ್: ಇದು ದೇಹಕ್ಕೆ ಮತ್ತು ಮನಸ್ಸಿಗೆ ಸಂಪೂರ್ಣ ಸೌಂದರ್ಯ ವರ್ಧಕ ಹಾಗೂ ಚಿಕಿತ್ಸಾ ಕ್ರಮ.

ಈಜುಕೊಳ: ಇಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಮನಸಾರೆ ಈಜಾಡಲು, ಜಲಕ್ರೀಡೆಯ ಆನಂದ ಅನುಭವಿಸಲು ಅವಕಾಶ ನೀಡಲಾಗುತ್ತದೆ.

ಜಿಮ್: ಮೆರಿಡಿಯನ್ ರೆಸಾರ್ಟ್ ಹಾಗೂ ಸ್ಪಾದಲ್ಲಿ ಉತ್ತಮ ಸುಸಜ್ಜಿತವಾದ ಹಾಗೂ ದೇಹದ ಫಿಟ್‌ನೆಸ್ ಅಭಿವೃದ್ಧಿಗೊಳಿಸಲು ಬೇಕಾದ ಎಲ್ಲಾ ಉಪಕರಣಗಳನ್ನು ಹೊಂದಿರುವ ವ್ಯವಸ್ಥಿತವಾದ ಜಿಮ್ ಕೇಂದ್ರವಾಗಿದೆ.

ಈಕೋ ಕ್ಯಾಂಪಸ್: ಮೆರಿಡಿಯನ್ ಬೇ ರೆಸಾರ್ಟ್ ಮತ್ತು ಸ್ಪಾ ಆವರಣವು ವಿಶಾಲವಾದ ಹಸಿರು ಸಿರಿಯಿಂದ ಕೂಡಿದ್ದು, ಪರಿಸರ ಸ್ನೇಹೀಯಾಗಿದೆ. ಆವರಣದೊಳಗಿನ ಎಲ್ಲಾ ರಸ್ತೆಗಳಲ್ಲಿಯೂ ಸೌರಶಕ್ತಿ ಚಾಲಿತ ವಿದ್ಯುತ್ ದೀಪಗಳಿವೆ. ಆವರಣದಲ್ಲಿ ವಿವಿಧ ಜಾತಿಯ ಮರಗಳಿದ್ದು, ವಿವಿಧ ರಿತಿಯ ವರ್ಣಮಯ ಪಕ್ಷಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಯುವ ಮೆರಿಡಿಯನ್ ಕನ್ವೆನ್‌ಷನ್ ಹಾಲ್: ಈ ಯುವ ಮೆರಿಡಿಯನ್ ಕನ್ವೆನ್‌ಷನ್ ಸೆಂಟರ್, ಕುಂದಾಪುರ ನಗರದಿಂದ ೫ ಕಿ.ಮೀ., ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಕೋಟೇಶ್ವರ ಬೈಪಾಸ್‌ನಿಂದ ಹಾಲಾಡಿ, ಆಗುಂಬೆ ರಸ್ತೆಯಲ್ಲಿ ೧ ಕಿ.ಮೀ., ಕೊಂಕಣ ರೈಲ್ವೇಗೆ ಕೇವಲ ೩ ಕಿ.ಮೀ. ಹತ್ತಿರವಿದ್ದು, ಉಡುಪಿ ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ ದೂರದಲ್ಲಿದೆ. ಪ್ರವಾಸಿಗಳಿಗೆ ಈ ತಾಣ ಕೈಬೀಸಿ ಕರೆಯುವಂತಿದ್ದು, ತಾಲೂಕಿನ ಪ್ರಸಿದ್ದ ಕಡಲ ತೀರ ಕೋಡಿ ಕಿನಾರಾ ಬೀಚ್‌ನಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ಸುಮಾರು ೯ ಎಕರೆ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಯ ಕಲ್ಪನೆಯನ್ನು ಹಾಗೆಯೇ ಉಳಿಸಿಕೊಂಡ ಅದ್ಭುತ ವಿನ್ಯಾಸದ ಈ ಬೃಹತ್ ಸಭಾಂಗಣ ಸಮುಚ್ಛಯವು ಯುವ ಮೆರಿಡಿಯನ್, ಮಿನಾಲ್, ಒಪೆರಾ ಪಾರ್ಕ್ ಬಯಲು ರಂಗಮಂದಿರ ಹೀಗೇ ೩ ಸಭಾಂಗಣಗಳನ್ನು ಹೊಂದಿದೆ.

ಯುವ ಮೆರಿಡಿಯನ್: ಸಮುಚ್ಛಯದಲ್ಲಿರುವ ಮುಖ್ಯ ಸಭಾಂಗಣಕ್ಕೆ ಯುವ ಮೆರಿಡಿಯನ್ ಎಂದು ಕರೆಯಲಾಗುತ್ತಿದ್ದು, ೧೪೦೦ ಮಂದಿ ಕುಳಿತುಕೊಳ್ಳಲು ಅನುಕೂಲವಾಗುವ ಸಂಪೂರ್ಣ ಹವಾನಿಯಂತ್ರಿತ ಐಶಾರಾಮಿ ಸಭಾಂಗಣ ಇದಾಗಿದೆ. ಆಸನಗಳು ವಿಶಾಲವಾಗಿದ್ದು, ಹೆಚ್ಚು ಆರಾಮದಾಯಕವಾಗಿದೆ. ಏಕಕಾಲದಲ್ಲಿ ೭೫೦ ಮಂದಿ ಕುಳಿತುಕೊಳ್ಳಬಹುದಾದ ವಿಶಾಲ ಆಸನಗಳನ್ನು ಹೊಂದಿದ ಡೈನಿಂಗ್ ಹಾಲ್ ಹಾಗೂ ೭೦*೨೦ ಅಳತೆಯ ಸ್ಕ್ರೀನ್ ಪ್ರಾಜೆಕ್ಟರ್‌ಗಳನ್ನು ಅಳವಡಿಸಲಾಗಿದ್ದು ಎಲ್ಲಾ ಪ್ರೇಕ್ಷಕರೂ ಆರಾಮವಾಗಿ ವೀಕ್ಷಿಸಲು ಅನುಕೂಲ ಕಲ್ಪಿಸಲಾಗಿದೆ.

ಮಿನಾಲ್: ಯುವ ಮೆರಿಡಿಯನ್ ಕನ್ವೆನ್‌ಷನ್ ಸೆಂಟರ್‌ನ ಇನ್ನೊಂದು ಪ್ರಮುಖ ಆಕರ್ಷಣೆಯೇ ಈ ಯುವ ಮಿನಾಲ್. ಇಲ್ಲಿ ೪೫೦ ಮಂದಿ ಒಮ್ಮೆಲೆ ಕುಳಿತುಕೊಳ್ಳಬಹುದಾದ ವ್ಯವಸ್ಥೆಯಿದ್ದು, ಇಲ್ಲಿಯೂ ಡೈನಿಂಗ್ ಹಾಲ್ ವ್ಯವಸ್ಥೆ ಇದೆ. ಇದು ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾದ ಎಲ್ಲಾ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದಂತಿದ್ದು, ನೋಡುಗರಿಗೆ ಮನಮೋಹಕವೆನ್ನಿಸುತ್ತಿದೆ.

ಒಪೆರಾ ಪಾರ್ಕ್: ಇದು ಒಂದು ವಿಶಿಷ್ಟವಾದ ತೆರೆದ ರಂಗ ಮಂದಿರ. ಆಧುನಿಕತೆಯ ಲೇಪನದೊಂದಿಗೆ ಅದ್ಭುತವಾಗಿ ನಿರ್ಮಾಣಗೊಂಡಿರುವ ಒಪೆರಾ ಪಾರ್ಕ್‌ನಲ್ಲಿ ಒಮ್ಮೆಗೆ ೨,೫೦೦ ಮಂದಿ ಕುಳಿತುಕೊಳ್ಳುವ ವ್ಯವಸ್ಥೆಯಿದೆ. ಕಲ್ಲಿನ ವಿವಿಧ ಕೆತ್ತನೆ ಕಲಾಕೃತಿಗಳನ್ನು ಹೊಂದಿರುವ ಯುವ ಒಪೆರಾ, ಅತ್ಯಂತ ಪ್ರಾಚೀನ ರಂಗ ವೇದಿಕೆಯಾದ ಗ್ರೀಕ್ ರಂಗ ಭೂಮಿಯ ವಿನ್ಯಾಸವನ್ನು ಹೋಲುತ್ತದೆ. ಈ ಮೂರು ಸಭಾಂಗಣಗಳಲ್ಲಿ ೨೫ಸಾವಿರ ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳಬಹುದಾಗಿದೆ.

ವಾಹನ ಪಾರ್ಕಿಂಗ್ ಸೌಲಭ್ಯ: ರಾಜ್ಯದ ಯಾವ ಸಭಾಂಗಣ ಹಾಗೂ ರೆಸಾರ್ಟ್‌ಗಳಲ್ಲಿಯೂ ಕಾಣ ಸಿಗಲಾರದ ಅತ್ಯಂತ ವ್ಯವಸ್ಥಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಈ ಯುವ ಮೆರಿಡಿಯನ್ ಸಮುಚ್ಚಯದಲ್ಲಿ ಇದೆ. ಒಂದು ಸಲಕ್ಕೆ ಸಾವಿರ ವಾಹನಗಳನ್ನು ಈ ಸಮುಚ್ಛಯದಲ್ಲಿ ಪಾರ್ಕಿಂಗ್ ಮಾಡಬಹುದಾಗಿದ್ದು, ವಾಹನ ದಟ್ಟಣೆಯ ಸಮಸ್ಯೆಯನ್ನು ನಿವಾರಿಸಲು ಸಮರ್ಥವಾಗಿ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಹೆಲಿಪ್ಯಾಡ್: ಯುವ ಕನ್ವೆನ್‌ಷನ್ ಸೆಂಟರ್ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಿರ್ಮಾಣಗೊಂಡಿದ್ದು, ವಿವಿಧ ರೀತಿಯ ಸಾರಿಗೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಇಲ್ಲಿ ಎರಡು ಹೆಲಿಪ್ಯಾಡ್ ವ್ಯವಸ್ಥೆಯಿದ್ದು, ಈಗಾಗಲೇ ಇಲ್ಲಿ ಹಲವಾರು ಹೆಲಿಕಾಪ್ಟರ್‌ಗಳು ಬಂದು ಹೋಗಿವೆ. ಈ ಹೆಲಿಪ್ಯಾಡ್‌ಗಳಿಂದಾಗಿ ಕರಾವಳಿ ತೀರದಲ್ಲಿ ಬಹಳಷ್ಟು ವರ್ಷಗಳಿಂದ ಉದ್ಭವಿಸಿದ್ದ ಹೆಲಿಪ್ಯಾಡ್ ಸಮಸ್ಯೆ ನಿವಾರಣೆಯಾದಂತಾಗಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಯುವ ಮೆರಿಡಿಯನ್ ಕನ್ವೆನ್‌ಷನ್ ಹಾಲ್‌ನ್ನು ಲೋಕಾರ್ಪಣೆ ಮಾಡುವ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಂದಾಪುರವನ್ನು ಗುರುತಿಸಲು ಸಾಧ್ಯವಾಗಿತ್ತು. ಇದೀಗ ದಕ್ಷಿಣ ಕರ್ನಾಟಕದಲ್ಲಿಯೇ ಮೊದಲನೆಯದೆನ್ನುವಂತಹ ಸುಸಜ್ಜಿತ ಐಷಾರಾಮಿ ಹೋಟೇಲ್ ಆರಂಭಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಶ್ವತವಾಗಿ ಗುರುತಿಸಿಕೊಳ್ಳುವತ್ತ ಕುಂದಾಪುರದ ಯುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ ಕುಮಾರ್ ಶೆಟ್ಟಿ ಸಹೋದರರು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಕುಂದಾಪ್ರ ಡಾಟ್ ಕಾಂ- editor@kundapra.com

Exit mobile version