Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಬರ್ಡ್ ಫೀಡರ್ ಇನ್‌ಸ್ಟಾಲೇಶನ್ ಒರಿಯೆಂಟೇಶನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಕಾಲೇಜಿನ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಹಾಗೂ ನ್ಯಾಚುರೋಪಥಿ ವಿದ್ಯಾರ್ಥಿಗಳಿಗೆ ‘ಬರ್ಡ್ ಫೀಡರ್ ಇನ್‌ಸ್ಟಾಲೇಶನ್’ ಕುರಿತು ಒರಿಯೆಂಟೇಶನ್ ಹಮ್ಮಿಕೊಳ್ಳಲಾಯಿತು.

ಪ್ರಥಮ ಎಂಎಸ್ಸಿ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವಿನುತಾ ಹಕ್ಕಿಗಳ ಸ್ವಭಾವ ಹಾಗೂ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿ ಜೆನಿಫರ್ ಪಿಂಟೋ, ಅನುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಬರ್ಡ್ ಫೀಡರ್‌ಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದರು. ಜೊತೆಗೆ ಈ ಬರ್ಡ್ ಫೀಡರ್‌ಗಳ ಅಳವಡಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಆಳ್ವಾಸ್ ಇಂಜಿಯನಿಯರಿಂಗ್ ಹಾಗೂ ನ್ಯಾಚುರೋಪತಿ ಕಾಲೇಜಿನ 400ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಸಂಯೋಜಕಿ ಡಾ. ರಶ್ಮಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

Exit mobile version