Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮಾಸ್ಕ್ ಧರಿಸದವರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕುಂದಾಪರ ನಗರದಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕಿದ್ದ ವಿದ್ಯಾರ್ಥಿಗಳ ಬೆನ್ನುತಟ್ಟಿ ಹುರಿದುಂಬಿಸಿದರೆ, ಮಾಸ್ಕ್ ಧರಿಸದವರಿಗೆ ಫೈನ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ತಾಲೂಕು ಆಸ್ಪತ್ರೆಯಿಂದ ಶಾಸ್ತ್ರಿ ವೃತ್ತದವರಗೆ ತೆರಳಿದ ಡಿಸಿ ಜಿ. ಜಗದೀಶ್ ಮುಖ್ಯರಸ್ತೆ ಅಕ್ಕಪಕ್ಕ ಇರುವ ಎಲ್ಲಾ ಅಂಗಡಿಗೆ ಹೋಗಿ ಕರೋನಾ ಏರುಗತಿಯಲ್ಲಿರುವುದರಿಂದ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸೂಚಿಸಿ, ಪಾರಿಜಾತ ವೃತ್ತದ ಬಳಿ ಕಾರ್ ಪಾರ್ಕಿಂಗ್‌ಗೆ ಭೇಟಿ ನೀಡಿದಾಗ ಮಾಸ್ಕ್ ಧರಿಸದೆ ಇದ್ದ ಕಾರ್ ಚಾಲಕರಿಗೆ ಮಾಸ್ಕ್ ಎಲ್ಲಿ ಎಂದು ಗರಮ್ ಆದರು. ಕಿಸೆಯಲ್ಲಿರುವ ಮಾಸ್ಕ್ ತೆಗೆದು ಧರಿಸಿದ ಚಾಲಕರಿಗೆ ಮಾಸ್ಕ್ ಇರಬೇಕಿರುವುದು ಮುಖದ ಮೇಲೆ, ಕಿಸೆಯಲ್ಲಲ್ಲ. ಮಾಸ್ಕ್ ಹಾಕದೆ ಅಸಹಾಕರ ತೋರಿಸಿದರೆ ಕರೋನ ನಿಯಂತ್ರಣ ಹೇಗೆ ಎಂದು ಪ್ರಶ್ನಿಸಿ, ಬಾಡಿಗೆ ಮಾಡುವ ಕಾರ್ ಚಾಲಕರು ಜವಾಬ್ದಾರಿಯಿಂದ ವರ್ತಿಸಿ ಎಂದು ಸೂಚಿಸಿದರು.

ಮಾಸ್ಕ್ ಜಾಗ್ರತಿಗೆಗಾಗಿ ಅಂಗಡಿ, ಹೋಟೆಲ್ ಸಮುಚ್ಛಯಕ್ಕೆ ಭೇಟಿ ನೀಡಿ ಮಾಸ್ಕ್ ಹಾಕದವರಿಗೆ ಖಡಕ್ ಎಚ್ಚರಿಕೆ ನೀಡಿ ಅಂಗಡಿ, ಹೋಟೆಲ್ ಮಾಲಕರಿಗೆ ಮಾಸ್ಕ್ ಧರಸದಿದ್ದರೆ ದಂಡ ವಿಧಿಸಲಾಗುತ್ತದೆ. ಮಾಸ್ಕ್ ಇಲ್ಲದೆ ಬರುವ ಗ್ರಾಹರಿಗೆ ಅವಕಾಶ ನೀಡಬೇಡಿ. ಎಲ್ಲರ ಸಹಕಾರದಲ್ಲಿ ಕರೋನಾ ನಿಯಂತ್ರಿಸಬೇಕೇ ವಿನಹ ಒಂದೆರಡು ಜನರು ನಿಯಮ ಪಾಲನೆ ಮಾಡಿದರೆ ಆಗೋದಿಲ್ಲ. ಜಿಲ್ಲಾಡಳಿತದ ಜೊತೆ ನಿಯಮ ಪಾಲಿಸುವ ಮೂಲಕ ಕೈಜೋಡಿಸಿ ಎಂದು ಕರೆ ನೀಡಿದರು.

ಹೋಟೆಲ್ ಪಾರಿಜಾತಕ್ಕೆ ಬಂದ ಡಿಸಿ ಕೋವಿಡ್ ನಿಯಮ ಪಾಲಿಸಿದ ಹೋಟೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಜೊತೆಗೆ ಬಂದ ಎಲ್ಲರಿಗೂ ಕಾಫಿ ಕುಡಿಸಿದರು. ರಸ್ತೆಯಲ್ಲಿ ಮಾಸ್ಕ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರ ಬೆನ್ನುತಟ್ಟಿ ಎಲ್ಲರೂ ವಿದ್ಯಾರ್ಥಿನಿಯರಂತೆ ಮಾಸ್ಕ್ ಧರಸಲು ಸೂಚಿಸಿದರು.

ಒಂದು ಕಡೆ ಜಿಲ್ಲಾಧಿಕಾರಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಅಧಿಕಾರಿಗಳ ಜೊತೆ ಇದ್ದು ಅಧಿಕಾರಿ ಡಿಸಿಗಿಂತ ಮುಂದಕ್ಕೆ ಸಾಗಿ ಡಿಸಿ ಬರುತ್ತಿದ್ದಾರೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿ ಮಾಸ್ಕ್ ಹಾಕಿಸುತ್ತಿದ್ದುದು ಕೂಡ ಕಂಡುಬಂತು

ಡಿಸಿ ಭೇಟಿ ವೇಳೆ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ತಹಸೀಲ್ದಾರ್ ಆನಂದಪ್ಪ ನಾಯ್ಕ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ಇದನ್ನೂ ಓದಿ
► ಕೋವಿಡ್ ಮಾರ್ಗಸೂಚಿ ಪಾಲನೆ ಹೆಸರಿನಲ್ಲಿ ಕಿರುಕುಳ ಖಂಡನೀಯ: ಕೆ. ವಿಕಾಸ್ ಹೆಗ್ಡೆ – https://kundapraa.com/?p=46555 .

 

Exit mobile version