Kundapra.com ಕುಂದಾಪ್ರ ಡಾಟ್ ಕಾಂ

ಅಮೇರಿಕದ ‘ರೀಜನಲ್ ಸ್ಪೆಲ್ಲಿಂಗ್ ಬಿ’ ಸ್ವರ್ಧೆಯಲ್ಲಿ ಮಿಂಚಿದ ಕುಂದಾಪುರದ ಸಹೋದರಿಯರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಮೇರಿಕದ ಕೊಲಂಬಿಯಾ ಮೇಸೊರಿಯನ್ ನಗರದಲ್ಲಿ ಬುಧವಾರ ನಡೆದ ರೀಜನಲ್ ಸ್ಪೆಲ್ಲಿಂಗ್ ಬಿ”ಸ್ಪಧೆ೯ಯಲ್ಲಿ ಜೇಯಾ ಶೆಟ್ಟಿ ಮತ್ತು ಅನ್ಯಾ ಶೆಟ್ಟಿ ವಿಶಿಷ್ಟ ಸಾಧನೆಗೈದಿದ್ದು, ಜೀಯಾ ಶೆಟ್ಟಿ ರೀಜನಲ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅನ್ಯಾ ಶೆಟ್ಟಿ ಫೈನಲ್ ಹಂತಕ್ಕೆ ತಲುಪಿ ದಾಖಲೆ ಮಾಡಿದ್ದಾರೆ.

ಮಿಡ್- ಮೇಸೊರಿಯನ್’ನ 25 ಶಾಲೆಗಳ ವಿದ್ಯಾರ್ಥಿಗಳು ಸ್ಪೆಲ್ ಬೀ ಸ್ವರ್ಧೆಯಲ್ಲಿ ಭಾಗವಹಿಸಿದ್ದು, 94 ಪದಗಳ ಬಳಿಕ 15 ಸ್ಪೆಲ್ಲರ್ ಹಾಗೂ 20 ಸುತ್ತಿನಲ್ಲಿ ಸ್ಮಿಥ್’ಟೋನ್ ಮಿಡಲ್ ಸ್ಕೂಲ್ ವಿದ್ಯಾರ್ಥಿನಿ ಜೀಯಾ ಟಾಪರ್ ಆಗಿ ಹೊರಹೊಮ್ಮಿದರು. ಜೀಯಾ ತನ್ನ ಸಹೋದರಿ, ಮೇರಿ ಪೆಕ್ಸಾನ್ ಕೀಲಿ ಎಲಿಮೆಂಟರಿ ಸ್ಕೂಲ್ ವಿದ್ಯಾರ್ಥಿನಿ ಅನ್ಯಾ ಶೆಟ್ಟಿಯನ್ನು ಮಣಿಸಿದರು. ಜೀಯಾ ಕಳೆದ ವರ್ಷವೂ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅನ್ಯ ಕಳೆದ ಭಾರಿ ನಾಲ್ಕನೇ ರೌಂಡ್’ಗೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಜೇಯಾ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಮ್ಮರ್ ಸ್ಪೆಲ್ಲಿಂಗ್ ಬಿ ಸ್ಪಧಾ೯ಕೂಟಕ್ಕೆ ತಯಾರಿ ನಡೆಸುತ್ತಿದ್ದಾಳೆ. ಈರ್ವರೂ ಕುಂದಾಪುರ ತಾಲೂಕು ಅಂಪಾರಿನ ಬಾಳೆಬೇರು ಮನೆ ಡಾ. ಪವನ್ ಕುಮಾರ್ ಶೆಟ್ಟಿ ಮತ್ತು ಚೆೈತ್ರಾ ಪಿ. ಶೆಟ್ಟಿ ಅವರ ಪುತ್ರಿಯರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ತಮ್ಮ ಮಕ್ಕಳ ಸ್ವರ್ಧೆಯ ಬಗ್ಗೆ ಬಗ್ಗೆ ಕೊಲಂಬಿಯಾ ಮೇಸೊರಿಯನ್ ಸುದ್ದಿಸಂಸ್ಥೆಗೆ ತಾಯಿ ಚೈತ್ರಾ ಶೆಟ್ಟಿ ಪ್ರತಿಕ್ರಿಯಿಸಿ, ಇಬ್ಬರಲ್ಲಿರುವ ಪುಸ್ತಕದ ಆಸಕ್ತಿ ಹಾಗೂ ಓದಿನ ಪ್ರೀತಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿತು. ನನ್ನ ಪತಿ ಡಾ ಪವನ್ ಕುಮಾರ್ ಶೆಟ್ಟಿ ಅವರು ಕೂಡ ಈ ಸ್ವರ್ಧೆಯಲ್ಲಿ ಇಬ್ಬರನ್ನೂ ಟಾಪ್-2ನಲ್ಲಿ ನೋಡಲು ಬಯಸಿದ್ದರು. ಟೇಕ್ವಾಂಡೋ, ಸೈನ್ಸ್ ಒಲಂಪಿಯಾರ್ಡ್, ಚೆಸ್, ಮ್ಯಾಥ್ಸ್ ಕಾಂಪಿಟೇಷನ್ ಪ್ರಾಕ್ಟೀಸ್’ಗಾಗಿ ಬಹಳಷ್ಟು ಸಮಯ ಮೀಸಲಿರಿಸಿದ್ದರು ಎಂದಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version