ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟು ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಯೋಧ ಮೋಹನ ದೇವಾಡಿಗ ಅವರ ಧರ್ಮಪತ್ನಿ ಯಶೋಧ ಅವರನ್ನು ಸನ್ಮಾನಿಸಲಾಯಿತು.
ಜೆಸಿಐ ಪೂರ್ವ ಅಧ್ಯಕ್ಷರಾದ ಪ್ರಿಯದರ್ಶಿನಿ ಬೆಸ್ಕೂರ್ ಅವರ ಮನೆಯ ಸಭಾಂಗಣದಲ್ಲಿ ಗುರುತಿಸಿ ಗೌರವಿಸಲಾಯಿತು, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು,
ಈ ಸಂದರ್ಭದಲ್ಲಿ ಜೆಸಿ ವಲಯ ಉಪಾಧ್ಯಕ್ಷರಾದ ನಾಗೇಶ್ ನಾವಡ, ಜೆಸಿ ಬೈಂದೂರು ಸಿಟಿ ವಲಯಾಧಿಕಾರಿ ಮಣಿಕಂಠ ಎಸ್ ದೇವಾಡಿಗ, ಉಪಾಧ್ಯಕ್ಷೆ ಸೌಮ್ಯ, ಘಟಕದ ಕಾರ್ಯದರ್ಶಿ ಸವಿತಾ ದಿನೇಶ್ ಗಾಣಿಗ, ಜೊತೆ ಕಾರ್ಯದರ್ಶಿ ಗೀತಾ ಬೈಂದೂರ್, ಜೇಸಿರೇಟ್ ಕಾರ್ಯದರ್ಶ ಗುಲಾಬಿ ಮರವಂತೆ, ಸದಸ್ಯರಾದ ಸಕ್ಕುಕಲ್ಮಕ್ಕಿ, ರಾಘವೇಂದ್ರ ಹೊಳ್ಳ, ರಾಘವೇಂದ್ರ ಶೇಟ್, ಸತೀಶ್ ದೇವಾಡಿಗ, ಉಪಸ್ಥಿತರಿದ್ದರು.