Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಎ.3ರಿಂದ 5ರವರೆಗೆ ಸುರಭಿ ಆಶ್ರಯದಲ್ಲಿ ‘ತ್ರಿದಿನ ನಾಟಕೋತ್ಸವ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾ ಸಂಸ್ಥೆಯಾದ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ‘ತ್ರಿದಿನ ನಾಟಕೋತ್ಸವ’ ರಂಗ ಸುರಭಿ 2021ಎ.3 ರಿಂದ 5ರವರೆಗೆ ಪ್ರತಿದಿನ ಸಂಜೆ 6ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ ಎಂದು ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಹೇಳಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎ.೩ರಂದು ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಾಟಕಕರ್ತ ವಿಠ್ಠಲ ಭಂಡಾರಿ ದಿನದ ನುಡಿಗಳನ್ನಾಡಲಿದ್ದಾರೆ. ಅಂದು ಉಪನ್ಯಾಸಕಿ, ಸಾಹಿತಿ ಸುಧಾ ಆಡುಕಳ ಗೌರವ ಸನ್ಮಾನವಿರಲಿದೆ. ಏ.4ರಂದು ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅವರು ದಿನದ ನುಡಿಗಳನ್ನಾಡಲಿದ್ದು, ರಂಗಭೂಮಿ ಹಾಗೂ ಕಿರುತೆರೆ ನಟ ಪ್ರದೀಪಚಂದ್ರ ಕುತ್ಪಾಡಿ ಅವರಿಗೆ ಗೌರವ ಸನ್ಮಾನಿವಿರಲಿದೆ. ಎ.೫ಂದು ಪ್ರಾಧ್ಯಾಪಕ ಸುಜಯೀಂದ್ರ ಹಂದೆ ದಿನದ ನುಡಿಗಳನ್ನಾಡಲಿದ್ದು, ಚಿತ್ರಕಲಾವಿದ ಎಂ.ಎಲ್. ಸೋಮವಾರದ ಅವರಿಗೆ ಗೌರವ ಸನ್ಮಾನವಿರಲಿದೆ ಎಂದು ಹೇಳಿದರು.

ಮೂರು ನಾಟಕಗಳು
ಎ.3ರ ಶನಿವಾರ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯಾಧಾರಿದ ಸುರಭಿ ರಿ. ಬೈಂದೂರು ಪ್ರಸ್ತುತಿಯ ಯೋಗಿಶ್ ಬಂಕೇಶ್ವರ ನಿರ್ದೇಶನ ಹಾಗೂ ನಟರಾಜ್ ಹೊನ್ನವಳ್ಳಿ ರಂಗರೂಪದ ನಾಟಕ ’ಜುಗಾರಿ ಕ್ರಾಸ್’ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಏ.4ರ ರವಿವಾರ ಶಶಿರಾಜ್ ಕಾವೂರು ನಿರ್ದೇನ ಮಂಗಳೂರು ಸಾಂಸ್ಕ್ರತಿಕ ಪ್ರತಿಷ್ಠಾನ ರಂಗಸಂಗಾತಿ ಅಭಿನಯದ ನಾಟಕ

‘ದಾಟ್ಸ್ ಆಲ್ ಯುವರ್’ ಆನರ್ ಪ್ರದರ್ಶನಗೊಳ್ಳಲಿದೆ. ಎ.೦5 ಸೋಮವಾರ ಜೋಸೆಪ್ ನಿರ್ದೇಶನದ ಸುಮನಸಾ ಕೊಡವೂರು ಅಭಿನಯದ ನಾಟಕ ’ನೆರಳಿಲ್ಲದೆ ಮನುಷ್ಯರು’ ಪ್ರದರ್ಶನಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು, ಖಜಾಂಚಿ ಸುರೇಶ್ ಹುದಾರ್, ಆನಂದ ಮದ್ದೋಡಿ ಉಪಸ್ಥಿತರಿದ್ದರು.

Exit mobile version