Site icon Kundapra.com ಕುಂದಾಪ್ರ ಡಾಟ್ ಕಾಂ

ಸಿವಿಲ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಆಶಿಕಾ ಪೈಗೆ ದ್ವಿತೀಯ ರ‍್ಯಾಂಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಭಾವಂತ ವಿದ್ಯಾರ್ಥಿನಿ ಆಶಿಕಾ ಪೈ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕರ್ನಾಟಕದಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ.

ಶಾಂತಾರಾಮ್ ಪೈ ಹಾಗೂ ಅನಸೂಯ ಪೈ ದಂಪತಿಗಳ ಪುತ್ರಿಯಾಗಿರುವ ಇವರು ಮಂಗಳೂರಿನ ಎಜೆ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಶಿಕ್ಷಣ ಪಡೆದಿದ್ದು, ಇದು ಎ.ಜೆ. ಇಂಜಿನಿಯರಿಂಗ್ ಕಾಲೇಜಿನ ಮೊಟ್ಟ ಮೊದಲ ಬ್ಯಾಚ್ ಆಗಿದ್ದುದು ಕೂಡ ವಿಶೇಷ. 10ನೇ ತರಗತಿಯಲ್ಲಿ ಪೂರ್ಣ 10 ಅಂಕಗಳ CGPA ಗಳಿಸಿದ್ದ ಇವರು, ನಂತರ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಮಾಡಿದ್ದು ಅಲ್ಲಿಯೂ 90% ಅಂಕ ಗಳಿಸಿದ್ದಲ್ಲದೇ, DCET ಎಕ್ಸಾಂನಲ್ಲಿ ಕರ್ನಾಟಕಕ್ಕೆ 40ನೇ ರ‍್ಯಾಂಕ್ ಗಳಿಸಿದ್ದರು.

ಇದೀಗ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 9.24 CGPA ಅಂಕಗಳೊಂದಿಗೆ , ದ್ವಿತೀಯ ರ‍್ಯಾಂಕ್‌ಗಳಿಸಿ M. tech ಮಾಡುವುದು ಇವರ ಸದ್ಯದ ಗುರಿಯಾಗಿದೆ.

ಆಶಿಕಾ ಪೈ ಸಾಧನೆಗೆ ಎಜೆ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ , ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಪ್ರಾಂಶುಪಾಲ ಶಾಂತಾರಾಮ್ ರೈ ಸಿ. ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Exit mobile version