Site icon Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ತಗ್ಗರ್ಸೆ ಇವರ ಆಶ್ರಯದಲ್ಲಿ 5ನೇ ವರ್ಷದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ವಹಿಸಿ ಮಾತನಾಡಿ, ಯುವಕರ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವಂತ ಕಾರ್ಯ ಇದಾಗಿದ್ದು ಗ್ರಾಮೀಣ ಮಟ್ಟದಲ್ಲಿ ಈ ಒಂದು ಪಂದ್ಯಾಟವನ್ನು ಎರ್ಪಡಿಸಿರುವುದು ಬಹಳ ಉತ್ತಮವಾದ ಕೆಲಸ. ಮುಂದಿನ ದಿನಗಳಲ್ಲಿ ಯುವಕರ ಸಂಘಟನೆ ಈ ಭಾಗದಲ್ಲಿ ಬೆಳೆಯುವುದಕ್ಕೆ ದಾರಿ ದೀಪವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಫ್ರೌಡಶಾಲಾ ಶಿಕ್ಷಕರಾದ ಗೋವಿಂದ ಬಿಲ್ಲವ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅನುಷ್ಕಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ಪ್ರಗತಿಪರ ಕೃಷಿಕ ರಾಜು ಗಾಣಿಗ ಹುಳುವಾಡಿ, ಮುಖ್ಯೋಪಧ್ಯಾಯರಾದ ತಿಮ್ಮಪ್ಪ ಗಾಣಿಗ, ಸ್ಥಳೀಯ ಉದ್ಯಮಿಗಳಾದ ಮುಕಾಂಬು ಶೆಟ್ಟಿ ನೆಲ್ಯಾಡಿ, ಗಣೇಶ್ ಬಿಲ್ಲವ, ಮಾಧವ ಬಿಲ್ಲವ, ಪ್ರಮೋದ್ ಆಚಾರ್ಯ ಉಪಸ್ಥಿತರಿದ್ದರು.

ರವೀಂದ್ರ ಟಿ. ಗಾಣಿಗ ಮತ್ತು ತಿಮ್ಮಪ್ಪ ಗಾಣಿಗ ನಿರೂಪಿಸಿದರು. ಹರ್ಷೇಂದ್ರ ಆಚಾರ್ಯ ಸ್ವಾಗತಿಸಿದರು. ಮಹೇಶ್ ಗಾಣಿಗ ವಂದಿಸಿದರು.

Exit mobile version