Kundapra.com ಕುಂದಾಪ್ರ ಡಾಟ್ ಕಾಂ

ಸೆ.2ರ ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲ

ಕುಂದಾಪುರ: ದೇಶದ 11 ಕೇಂದ್ರ ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ 2 ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬುಧವಾರದಂದು ಭಾರತೀಯ ಮಜ್ದೂರ್‌ಸಂಘ (ಬಿ.ಎಂ.ಎಸ್) ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೇಸ್ (ಇಂಟಕ್) ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಗಳು ಜಂಟಿಯಾಗಿ ಸಭೆ ಸೇರಿ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸಲು ಕುಂದಾಪುರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿತು.

ಪ್ರಮುಖ ಬೇಡಿಕೆಗಳಾದ ರಸ್ತೆ ಸಾರಿಗೆ ಮಸೂದೆ-2014 ವಾಪಾಸ್ಸು ಪಡೆಯಬೇಕು, ಕಾರ್ಮಿಕ ಕಾನೂನು ಮಾಲೀಕರ ಪರ ತಿದ್ದುಪಡಿ ಕೈಬಿಡಬೇಕು, ಕನಿಷ್ಟ ವೇತನ ರೂ. 15,000 ನಿಗದಿಯಾಗಬೇಕು, ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿಯನ್ನು ಶೇ.49ರಷ್ಟು ಹೆಚ್ಚಿಸುವ ಸುಗ್ರೀವಾಜ್ಞೆ ವಾಪಾಸ್ಸಾಗಬೇಕು, ರೂ. 3,000 ಕನಿಷ್ಠ ಪಿಂಚಣಿ ನೀಡಬೇಕು, ಸಾರ್ವಜನಿಕ ರಂಗದ ಶೇರು ವಿಕ್ರಯ ನಿಲ್ಲಿಸಬೇಕು. ಬೆಲೆ ಏರಿಕೆ ತಡೆಗಟ್ಟಬೇಕು, ಗುತ್ತಿಗೆ ಕಾರ್ಮಿಕ ಕಾನೂನಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಿದ್ದುಪಡಿ ಮಾಡಬೇಕು, ಮುಂತಾದ ಬೇಡಿಕೆಗಳಿಗಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದೆ.

ಸಿಐಟಿಯು ತಾಲೂಕು ಅಧ್ಯಕ್ಷರಾದ ಹೆಚ್. ನರಸಿಂಹ, ಬಿ.ಎಂ.ಎಸ್.ನ ಗೌರವಾಧ್ಯಕ್ಷರಾದ ಸತೀಶ್ ಕೆ.ಟಿ. ಸುರೇಶ್‌ಪುತ್ರನ್, ಭಾಸ್ಕರಖಾರ್ವಿ, ಇಂಟಕ್ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ಕೆ. ಆನಂದ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶಕಲ್ಲಾಗರ, ಲಕ್ಷ್ಮಣ ಬರೇಕಟ್ಟು, ರಮೇಶ್ ವಿ., ಚಂದ್ರ ವಿ, ರಾಜು ದೇವಾಡಿಗ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version