ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 2020ರಲ್ಲಿ ನಡೆಸಿದ ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಐದು ಮತ್ತು ಆರನೇ ಸೆಮಿಸ್ಟರ್ಗಳ ‘ಪೈನಾನ್ಶಿಯಲ್ ಎಕೌಂಟಿಗ್’ ವಿಷಯದಲ್ಲಿ ಕಾಲೇಜಿನ ದೀಪಾ ದೇವಾಡಿಗ ಮತ್ತು ಜ್ಯೋತಿ ಇವರು 300 ರಲ್ಲಿ 300 ಅಂಕ ಗಳಿಸಿ ICAI ಕೊಡ ಮಾಡುವ ಚಿನ್ನದ ಪದಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ .
ಇವರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಬಿ ಎಂ ಸುಕುಮಾರ ಶೆಟ್ಟಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಭಿನಂದಿಸಿದ್ದಾರೆ.

