Kundapra.com ಕುಂದಾಪ್ರ ಡಾಟ್ ಕಾಂ

ನಟ ರಿಷಬ್ ಶೆಟ್ಟಿ ಅವರಿಂದ ಕೊಲ್ಲೂರು ದೇವಳದಲ್ಲಿ ಗಣಹೋಮ, ಕುಟುಂಬಿಕರು ಭಾಗಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಭಾನುವಾರ ತಮ್ಮ ಕುಟುಂಬಿಕರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಳದಲ್ಲಿ ಗಣಹೋಮ ನೆರವೇರಿಸಿದರು.

ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿರುವ ಅವರು ಕೊಲ್ಲೂರು, ಗುಡ್ಡಟ್ಟು, ಆನೆಗುಡ್ಡೆ, ಮಂದರ್ತಿ, ಮಣಿಕಲ್, ಧರ್ಮಸ್ಥಳ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ಕುಂದಾಪುರ ತಾಲೂಕಿನ ಕೆರಾಡಿಯವರಾದ ನಟ ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುವಿನಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವುದಲ್ಲದೇ, ಬೆಲ್ ಬಾಟಂ, ಹೀರೋ ಮೊದಲಾದ ಸಿನೆಮಾಗಳಲ್ಲಿ ನಾಯಕ ನಟನಾಗಿಯೂ ಸೈ ಎನಿಸಿಕೊಂಡಿದ್ದಾರೆ.

Exit mobile version