Site icon Kundapra.com ಕುಂದಾಪ್ರ ಡಾಟ್ ಕಾಂ

ಗಾಳಿ ಮಳೆಗೆ ಮರ ಉರುಳಿ ಅಪಾರ ಹಾನಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೋಮವಾರ ನಡುರಾತ್ರಿ ಬೈಂದೂರು ಪರಿಸರದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಿದ್ದು, ಅದೇ ವೇಳೆಗೆ ಗಾಳಿಯೂ ಸೇರಿಕೊಂಡ ಕಾರಣ ಪಡುವರಿಯ ಚಾವನಮನೆ ಕುಪ್ಪಯ್ಯ ಶೇರುಗಾರ್ ಎಂಬುವರ ಹಿತ್ತಿಲಿನಲ್ಲಿದ್ದ ಎತ್ತರದ ತೆಂಗಿನ ಮರ ಉರುಳಿ ಅವರ ಹಟ್ಟಿಯ ಮುಂಭಾಗದ ಹೆಂಚಿನ ಮಾಡು ಕುಸಿದಿದೆ.

ಮರ ಅವರ ಮನೆ ಮತ್ತು ಹಟ್ಟಿಯ ಕಿರಿದಾದ ಜಾಗದಲ್ಲಿ ಬಿದ್ದ ಕಾರಣ ಮನೆಗೆ ಹಾನಿಯಾಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿ, ನಷ್ಟ ಅಂದಾಜಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

Exit mobile version