Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಆದಿದ್ರಾವಿಡ ಸೇವಾ ಸಂಘದಿಂದ ಹಣ್ಣು- ಹಂಪಲು ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಆದಿದ್ರಾವಿಡ ಸೇವಾ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆಯ ಅಂಗವಾಗಿ ನರ್ಸು ಹಾಗೂ ಭಗವಾನ್ ದಾಸ್ರವರ ಸ್ಮರಣಾರ್ಥ ಅವರ ಮಗ ವಿ. ಗಣೇಶ್ ಇವರಿಂದ 28ನೇ ವರ್ಷದ ಹಣ್ಣು- ಹಂಪಲು ವಿತರಣಾ ಕಾರ್ಯಕ್ರಮ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಇಂದು ನಡೆಯಿತು.

ಕುಂದಾಪುರದ ಠಾಣಾಧಿಕಾರಿ ಸದಾಶಿವ ಗವರೋಜಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಹೆಮ್ಮಾಡಿ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಯು. ಸತ್ಯನಾರಾಯಣ ರಾವ್, ವೈದ್ಯರಾದ ವೀಣಾ ಶಂಕರ್, ನರ್ಸ್ ಜಯ ಡಿಸೋಜಾ, ಅನ್ನಪೂರ್ಣ, ಮೃತರ ಹಿತೈಷಿಗಳಾದ ಮಿಥುನ್, ವಿನಯ್ ಕುಮಾರ್,ಮುತ್ತ, ಮಂಜುನಾಥ್, ಪ್ರದೀಪ್ ಕೆಎಸ್, ಗಂಗಾಧರ್ ಬಿಹೆಚ್ಎಂ, ಶಶಿಧರ್ ಉಪಸ್ಥಿತರಿದ್ದರು.

Exit mobile version