Kundapra.com ಕುಂದಾಪ್ರ ಡಾಟ್ ಕಾಂ

ಪಾಡ್ದನ ಕವಿ, ಗಾಯಕಿ ಗಿಡಿಗೆರೆ ರಾಮಕ್ಕ ಮುಗ್ಗೇರ್ತಿ ಅವರಿಗೆ ಬಿಂದುಶ್ರೀ ಪ್ರಶಸ್ತಿ, ಎ.18ರಿಂದ ಸುರಭಿ ಜೈಸಿರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಪ್ಪತ್ತೋಂದನೇ ವರ್ಷದ ಸಂಭ್ರಮದಲ್ಲಿರುವ ಬೈಂದೂರಿನ ಕಲಾ ಸಂಸ್ಥೆ ಸುರಭಿ ಆಶ್ರಯದಲ್ಲಿ ಎ.18ರಿಂದ ಮೂರು ದಿನಗಳ ಕಾಲ ಸುರಭಿ ಜೈಸಿರಿ ಕಾರ್ಯಕ್ರಮ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿದಿನ ಸಂಜೆ 6ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.

ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಕೊಡಮಾಡುತ್ತಿರುವ ಬಿಂದಶ್ರೀ ಪ್ರಶಸ್ತಿಗೆ ಈ ಭಾರಿ ತುಳುನಾಡಿನ ಪ್ರಸಿದ್ಧ ಪಾಡ್ಡನ ಕವಿ ಹಾಗೂ ಗಾಯಕಿ ಆಯ್ಕೆಯಾಗಿದ್ದು ಎ.20 ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಎಪ್ರಿಲ್18ರಂದು ಸುರಭಿ ಜೈಸಿರಿಯನ್ನು ಶ್ರೀ ವರಲಕ್ಷ್ಮೀ ಚಾರೀಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಡೈರೆಕ್ಟರ್ ಗೋವಿಂದ ಪೂಜಾರಿ ಉದ್ಘಾಟಿಸಲಿದ್ದು, ಶ್ರೀ ರಾಮ ಸೌಹಾರ್ದ ಕ್ರಡಿಟ್ ಕೋ- ಆಪರೇಟಿವ್್ನಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾಕ್ಷೇತ್ರ ಕುಂದಾಪುರ ಅದ್ಯಕ್ಷರಾದ ಬಿ. ಕಿಶೋರ ಕುಮಾರ್ ದಿಕ್ಸೂಚಿ ಬಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಬೈಂದೂರು ತಾಲೂಕು ಪಂಚಾಯತ್ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ,ಜೆಸಿಐ ಬೈಂದೂರು ಸಿಟಿ ಸ್ಥಾಪಕಾಧ್ಯಕ್ಷರಾದ ಮಣಿಕಂಠ ದೇವಾಡಿಗ , ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳಾದ ರಾಮ ಮೋಗವೀರ ಗರ್ಜಿನಹಿತ್ಲು, ತಿಯೋಧರ್ ಫೆರ್ನಾಂಡಿಸ್ ಉಪ್ಪುಂದ ಮೊದಲಾದವರು ಉಪಸ್ಥಿತರಿರಲಿದ್ದಾರೆ. ಅಂದು ಖ.ರೈ.ಸೇ.ಸ. ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ.

ಎಪ್ರಿಲ್ 19ರ ಸೋಮವಾರ ಸಂಜೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಭಿ ಅಧ್ಯಕ್ಷರಾದ ನಾಗರಾಜ ಪಿ ಯಡ್ತರೆ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಕರ್ನಾಟಕ ಸರಕಾರ ಯೋಜನಾ ಮಂಡಳಿ ಸದಸ್ಯರಾದ ಪ್ರೀಯದರ್ಶಿನಿ ಕಮಲೇಶ್ ಬೆಸ್ಕೂರ್‍, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಸಹಾಯಕ ಅಧ್ಯಕ್ಷರಾದ ಕುಮಾರ್‍ ಬೇಕ್ಕೇರಿ, ಎಸ್ಸಿ್ಡಿಸಿಸಿ ಬ್ಯಾಂಕ್‍ ಮೇಲ್ವಿಚಾಲಕರಾದ ಶಿವರಾಮ ಪೂಜಾರಿ ಯಡ್ತರೆ, ಬೈಂದೂರು ಸೇವಾ ಸಂಗಮ ಶಿಶು ಮಂದಿರದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ, ಮಾಜಿ ಗ್ರಾ.ಪಂ ಉಪಾದ್ಯಕ್ಷರಾದ ಸದಾಶಿವ ಡಿ ಪಡುವರಿ, ಶಿರೂರು ಉದ್ಯಮಿಗಳಾದ ರಾಮ ಮೇಸ್ತ ಮೊದಲಾದವರು ಉಪಸ್ಥಿತರಿರಲಿದ್ದಾರೆ. ಅಂದು ಹಿರಿಯ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಸಾವಿತ್ರಿಬಾಯಿ ಪುಲೆ ಸಾಧಕ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸತ್ಯನಾ ಕೊಡೇರಿ ಅವರನ್ನು ಸನ್ಮಾನಿಸಲಾಗುತ್ತದೆ.

ಎಪ್ರಿಲ್ 20ರ ಮಂಗಳವಾರ ಸಂಜೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ತುಳುನಾಡಿನ ಪಾಡ್ಡನ ಕವಿ ಹಾಗೂ ಗಾಯಕಿ ಗಿಡಿಗೆರೆ ರಾಮಕ್ಕ ಮುಗ್ಗೇರ್ತಿ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಬ್ಯಾಂಕ್ ಅಧಿಕಾರಿಯಾದ ವಸಂತ ಹೆಗ್ಡೆ ಶುಭಶಂಸನೆಗೈಯಲಿದ್ದಾರೆ. ಹಿರಿಯ ಪತ್ರಕರ್ತರಾದ ಎಸ್ ಜನಾರ್ದನ ಮರವಂತೆ ಅಭಿನಂದಾನ ನುಡಿಯಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಲ್ಲೂರು ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಜೀವ ವಿಮಾ ಅಧಿಕಾರಿಯಾದ ಸೋಮನಾಥನ್, ಸುರತ್ಕಲ್ ಪ್ರಥಮರ್ಜೆ ಗುತ್ತಿಗೆದಾರರಾದ ಶ್ರೀಧರ್ ಬೇಲೆಮನೆ ಶಿರೂರು ಅಂಬಿಕಾ ಜ್ಯುವೆಲ್ಲರ್ಸ್ನ, ಹರೀಶ್ ಶೇಟ್ ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:
ಸುರಭಿ ಸಂಸ್ಥೆಯ ಕಲಾವಿದರಿಂದ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಎಪ್ರಿಲ್ 18ರಂದು ಸುರಭಿ ವಿದ್ಯಾರ್ಥಿಗಳ ಯಕ್ಷನಾದ ಕಾರ್ಯಕ್ರಮದಲ್ಲಿ ಪ್ರಶಾಂತ ಮಯ್ಯ ದಾರಿಮಕ್ಕಿ ನಿರ್ದೇಶನದಲ್ಲಿ ಮೀನಾಕ್ಷಿ ಕಲ್ಯಾಣ ಮತ್ತು ಪಾಂಚಜನ್ಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಎಪ್ರಿಲ್ 19ರಂದು ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ನಿರ್ದೇಶನದಲ್ಲಿ ಸುರಭಿ ವಿದ್ಯಾರ್ಥಿಗಳಿಂದ ಗಾನ ಲಹರಿ, ಪಾರಂಬಳ್ಳಿ ವಿದೂಷಿ ಮಾನಸ ರಾಘವೇಂದ್ರ ನಿರ್ದೇಶನದಲ್ಲಿ ಸುರಭಿಯ ನೃತ್ಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ಗಿರೀಶ್ ಗಾಣಿಗ ತಗ್ಗರ್ಸೆ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಕಲಾಕುಂಚ ಸಂಭ್ರಮ ಪ್ರದರ್ಶನ ಜರುಗಲಿದೆ

ಎಪ್ರಿಲ್ 20ರಂದು ಸಂಜೆ ವಿದ್ವಾನ್ ಚಂದ್ರಶೇಖರ ನಾವಡ ನಿರ್ದೇಶನದಲ್ಲಿಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ನರ್ತನ ನಮನ ಹಾಗೂ ಭಾಮಾ ರುಕ್ಮಿಣಿ ನೃತ್ಯರೂಪಕ ಹಾಗೂ ಸುರಭಿ ಮಹಿಳಾ ಸದಸ್ಯರಿಂದ ಮಹಿಳಾ ಚಂಡೆ ವಾದನ ಜರುಗಲಿದೆ

ಗಿಡಿಗೆರೆ ರಾಮಕ್ಕ ಮುಗ್ಗೇರ್ತಿ ಅವರಿಗೆ ಬಿಂದುಶ್ರೀ
ಎಂಭತ್ತೈದರ ಇಳಿವಯಸ್ಸಿನಲ್ಲಿಯೂ ಸಂಧಿ, ಪಾಡ್ದನಗಳನ್ನು ನಿರರ್ಗಳವಾಗಿ ಹಾಡಿ, ಕೇಳುಗರ ಮೈಪುಳಕಗೊಳಿಸುವ, ತುಳುನಾಡಿನ ಜನಪದ ಸಾಹಿತ್ಯದ ಅಮೂಲ್ಯ ಐತಿಹಾಸಿಕ ಬದುಕನ್ನು ವರ್ತಮಾನದಲ್ಲಿ ಕಟ್ಟಿಕೊಟ್ಟ ಪಾಡ್ದನ ಕವಯತ್ರಿ ಹಾಗೂ ಗಾಯಕಿ ಗಿಡಿಗೆರೆ ರಾಮಕ್ಕ ಮುಗ್ಗೇರ್ತಿ ಅವರನ್ನು 2021ನೇ ಸಾಲಿನ ಬಿಂದುಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಮಕ್ಕ ಮುಗ್ಗೇರ್ತಿ ಅವರು ಜನಿಸಿದ್ದು ಮಂಗಳೂರು ತಾಲೂಕಿನ ವಾಮಂಜೂರಿನಲ್ಲಿ. ತಮ್ಮ 17ನೇ ವಯಸ್ಸಿನಲ್ಲಿ ಕಟೀಲಿನ ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಅವರನ್ನು ಮದುವೆಯಾದರು. ಮುಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡ್ದನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುವ ಕೆಲಸ ಅವರಿಂದ ನಡೆಯಿತು.

ರಾಮಕ್ಕ ಅವರಿಗೆತುಳು ಕವಿತೆ, ಪಾಡ್ದನ ಮತ್ತು ಸಂಧಿಗಳು ತಮ್ಮ ಅಜ್ಜಿಯಿಂದ ಬಳುವಳಿಯಾಗಿ ಬಂದಿದೆ. ತುಳು ಪಾಡ್ದನಗಳನ್ನು ಸಂಗ್ರಹಿಸುವುದಲ್ಲದೆ, ರಚನಾ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಮೂವತ್ತಕ್ಕೂ ಹೆಚ್ಚು ಸುದೀರ್ಘ ಪಾಡ್ದನ ಕಾವ್ಯಗಳನ್ನು ಹದಿನೈದಕ್ಕೂ ಹೆಚ್ಚು ಕಬಿತ’ ಗಳನ್ನೂ ಮಾನಸಿಕ ಪಠ್ಯ ರೂಪದಲ್ಲಿ ತಮ್ಮಲ್ಲಿ ದಾಖಲಿಸಿಕೊಂಡಿರುವರು. ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಮಂಗಳೂರು ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಜನಪದ ಸಂಶೋಧನೆ, ಪಿ.ಹೆಚ್.ಡಿ ಅಧ್ಯಯನಗಳಲ್ಲಿ ಇವರ ಬೌದ್ಧಿಕ ಕೊಡುಗೆಯ ದಟ್ಟ ಛಾಯೆ ಇದೆ.

ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ಕನಡ,ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಹಾಗು ಶ್ರಮಿಕ ಸಂಸ್ಕ್ರತಿಯ ಸಂಧಿ- ಪಾಡ್ದನಗಳು ಇವರಿಗೆ ಕಂಠಪಾಠ. ಇವರು ದೀರ್ಘವಾಗಿ ಹಾಡಿರುವ ಸಿರಿ ಪಾಡ್ದನವು ಎ.ವಿ. ನಾವಡರ ಸಂಪಾದಕತ್ವದಲ್ಲಿ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ’ ಎಂದು ಗ್ರಂಥರೂಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ.

Exit mobile version