ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಲೂರು ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ‘ಚಿತ್ರಕೂಟ ಹೊಸ ಉತ್ಪನ್ನವಾದ ‘ಪೋಷಕ್’ ಮತ್ತು ‘ರಿಲಾಕ್ಸ್ ಟೀ’ ಎ.16ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ.
ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹಾಗೂ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಮಂಜ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರಕೂಟದ ಡಾ. ರಾಜೇಶ್ ಬಾಯರಿ ಹಾಗೂ ಅನುಲೇಖಾ ರಾಜೇಶ್ ಬಾಯರಿ ತಿಳಿಸಿದ್ದಾರೆ.
ಚಿತ್ರಕೂಟ ಪೋಷಕ್:
ನೈಸರ್ಗಿಕ ಸಿರಿಧಾನ್ಯಗಳು, ಬಹುಧಾನ್ಯಗಳು ಹಾಗೂ ಗಿಡಮೂಲಿಕೆಗಳನ್ನು ಸೇರಿಸಿ ತಾಯಾರಿಸಿದ ಉತ್ಪನ್ನವೇ ‘ಚಿತ್ರಕೂಟ ಪೋಷಕ್. 3ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರನ್ನು ಗಮನದಲ್ಲಿರಿಸಿಕೊಂಡು ಈ (ಆಹಾರ) ಉತ್ಪನ್ನವನ್ನು ತಯಾರಿಸಲಾಗಿದೆ. ಗಿಡಮೂಲಿಕೆ ಹಾಗೂ ನಾನಾ ರೀತಿಯ ಧಾನ್ಯಗಳನ್ನು ಬಳಸಿ ತಯಾರಿಸಿದ್ದರಿಂದ ಜನರ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಪರಿಣಾಮಕಾರಿಯಾಗಿದೆ. ಇದು ದೇಹದ ಮಾಸ್ ಇಂಡೆಕ್ಸ್ನ್ನು ಕಾಪಾಡಲಿದೆ. ಅಕಾಲಿಕ ಮುಪ್ಪಿನ ನಿಯಂತ್ರಣಕ್ಕೆ, ದೇಹದ ಅಂಗಾಂಶಗಳ ಪುನಶ್ಚೇತನಕ್ಕೆ, ಥೈರಾಯ್ಡ್ ಸಮಸ್ಯೆಗಳ ನಿವಾರಣೆಗೆ, ಹೃದಯ ಸಂಬಂಧಿ ತೊಂದರೆ ಕುಂಠಿತಗೊಳ್ಳಲು ಹಾಗೂ ಮಹಿಳೆಯರಿಗೆ ಮುಟ್ಟು ನಿಲ್ಲುವ ಸಂದರ್ಭ ಸಹಕಾರಿಯಾಗಲಿದೆ. 6 ತಿಂಗಳು ನಿರಂತರವಾಗಿ ಬಳಕೆ ಮಾಡಿದಲ್ಲಿ ಅತ್ಯುತ್ತಮ ಫಲಿತಾಂಶ ದೊರಕಲಿದೆ. ಮೊದಲ ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಳಸಬಹುದು. ಮತ್ತೆ ಸಂಜೆಯ ಟೀ ಕುಡಿಯುವ ಸಂದರ್ಭ ಇದನ್ನು ಬಳಸಬಹುದು. 10 ಗ್ರಾಂನಷ್ಟು ಚಿತ್ರಕೂಟ ಪೋಷಕ್ ಹೆಲ್ತ್ ಮಿಕ್ಸ್ನ್ನು 250ಮಿಲೀ ನೀರು ಅಥವಾ ಹಾಲಿಗೆ ಬೆರೆಸಿ 5ರಿಂದ 10 ನಿಮಿಷದವರೆಗೆ ಒಲೆಯಲ್ಲಿ ಬೇಯಿಸಿ ರುಚಿಗೆ ತಕ್ಕಂತೆ ಉಪ್ಪು ಅಥವಾ ಬೆಲ್ಲವನ್ನು ಸೇರಿಸಿ ತಯಾರಿಸಬಹುದು. ಅಲ್ಲದೆ ಒಂದು ಕಪ್ ಅಕ್ಕಿ ಹಿಟ್ಟು ಅಥವಾ ಗೋದಿ ಹಿಟ್ಟಿಗೆ ಕಾಲು ಕಪ್ ಚಿತ್ರಕೂಟ ಪೋಷಕ್ ಸೇರಿಸಿ ರೊಟ್ಟಿ ಅಥವಾ ಚಪಾತಿ ರೀತಿಯಲ್ಲಿ ತಯಾರಿಸಿ ಸೇವಿಸಬಹುದಾಗಿದೆ.
ಚಿತ್ರಕೂಟದಿಂದ ಗಂಟಲಿನ ಸ್ವಚ್ಚತೆ ಹಾಗೂ ಗಾರ್ಗಲ್ಗೆ, ಮೂಗಿನ ರಕ್ಷಣೆಗೆ, ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಗೆ ಗಿಡಮೂಲಿಕೆಗಳಿಂದ ‘ಪಂಚ ರಕ್ಷಕ್ ಕಿಟ್ ಬಿಡುಗಡೆಗೊಳಿಸಿದ್ದರು. ಪೂರಕ ಆಹಾರವಾಗಿ ಸ್ವಾಸ್ಥ್ಯ ರಸಾಯನ, ಪೂರಕ ಪಾನೀಯವಾಗಿ ರಕ್ಷಕ್ ಹರ್ಬಲ್ ಟೀ, ಬಾಯಿ, ಗಂಟಲಿನ ಆರೋಗ್ಯಕ್ಕಾಗಿ ಸ್ವರಸುಧಾ, ಮೂಗಿನ ರಕ್ಷಣಾ ಶಕ್ತಿಯ ವೃದ್ಧಿಗಾಗಿ ನಾಸಾಮೃತ, ಮನೆಯ ವಾತಾವರಣದ ನೈರ್ಮಲ್ಯಕ್ಕಾಗಿ ರಾಕ್ಷೋಘ್ನ ಧೂಪವನ್ನು ಈ ಕಿಟ್ ಒಳಗೊಂಡಿತ್ತು. ಜನರ ಆರೋಗ್ಯಕ್ಕಾಗಿ ಸಿದ್ದಪಡಿಸಿರುವ ಈ ಕಿಟ್ ಪರಿಣಾಮಕಾರಿಯಾಗಿತ್ತು. ಮಕ್ಕಳ ಆರೋಗ್ಯಕ್ಕಾಗಿ ಬ್ರಾಹ್ಮಿ ಹಾಗೂ ಒಣಹಣ್ಣುಗಳಿಂದ ಪುಷ್ಟೀಕರಿಸಿದ ಖನಿಜಾಂಶ ಮತ್ತು ಪೋಷಕಾಂಶ ಒದಗಿಸುವ ‘ಶಿಶು ಪೋಷಕ್ ಎಂಬ ನೈಸರ್ಗಿಕ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಚಿತ್ರಕೂಟದ ಈ ಎರಡು ಉತ್ಪನ್ನಗಳು ಜನರಿಂದ ಸ್ವೀಕೃತಗೊಂಡಿದ್ದು ಇದೀಗ 3ವರ್ಷ ಮೇಲ್ಪಟ್ಟವರಿಗಾಗಿ ‘ಚಿತ್ರಕೂಟ ಪೋಷಕ್ ತಯಾರಿಸಿದ್ದಾರೆ.
ಚಿತ್ರಕೂಟ ಪೋಷಕ್ ಮಾಹಿತಿಗೆ ಹಾಗೂ ಉತ್ಪನ್ನ ಖರೀದಿಗೆ (ಮೊ.) 9480011578 ಗೆ ಸಂಪರ್ಕಿಸಬಹುದಾಗಿದೆ.