Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ಬಹುಭಾಷಾ ಕವಿಗೋಷ್ಠಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಎಲ್ಲರೊಳಗೂ ಅನನ್ಯವಾದ ಪ್ರತಿಭೆ ನಲೆಸಿದ್ದು, ಅದನ್ನು ಅನಾವರಣಗೊಳಿಸುವ ಪ್ರಯತ್ನ ನಡೆಯಬೇಕು ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಝಾನ್ಸಿ ಹೇಳಿದರು.

ಶಿವರಾಮ ಕಾರಂತ ಸಭಾಂಗಣದಲ್ಲಿ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಕವಿತೆಗೊಂದು ಲಯವಿದ್ದು, ಹಾಡಲು ಸಹಕಾರಿಯಾಗಿರಬೇಕು. ಕವನಗಳು ಸನ್ನಿವೇಷಗಳಿಗೆ ಅನುಗುಣವಾಗಿ ಸೃಷ್ಟಿಯಾಗುವ ಸಾಹಿತ್ಯವಾಗಿದೆ ಎಂದರು.

ಕವಿಗೋಷ್ಠಿಯ ಸಮನ್ವಯಕಾರರಾಗಿ ಭಾಗವಹಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ರೋಶನ್ ಫ್ರಾನ್ಸಿಸ್, ಮನಸ್ಸಿಗೆ ಮುದ ನೀಡುವ ಕ್ಷಣಗಳನ್ನು ಕವನಗಳಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಆಳವಾದ ಆಧ್ಯಯನ ಮತ್ತು ಅಲೋಚನಾ ಶಕ್ತಿಯಿಂದ ಕವನ ಬರೆಯಲು ಸಾಧ್ಯ.
ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾರ್ಥಿನಿ ನಂದಿತ ಸ್ವಾಗತಿಸಿ, ದಿಯಾ ವಂದಿಸಿದರು. ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕಿ ಡಾ ಸುಲತಾ ಉಪಸ್ಥಿತರಿದ್ದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಯಶ್, ಶ್ರೀಧರ್ ಎಚ್. ವಿ, ಶ್ವೇತಾ ಎಸ್.ಎಂ, ಕ್ಷಮಾ ಎಸ್, ರಕ್ಷಾ, ದೀಕ್ಷಾ ಪಿ, ಕಲ್ಪನಾ, ದಿಕ್ಷಿತ್, ಚೈತನ್ಯಾ, ತೃಪ್ತಿ ಅವರು, ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ವಿದ್ಯಾರ್ಥಿಗಳು ಹಿಂದಿ, ಸಂಸ್ಕೃತ, ಕನ್ನಡ ,ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕವಿತೆಗಳನ್ನು ಮಂಡಿಸಿದರು.

Exit mobile version