Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ದೇವಳದಲ್ಲಿ ಚಂಡಿಕಾಹೋಮ ನೆರವೇರಿಸಿದ ಮುಸ್ಲಿಂ ಕುಟುಂಬ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಿಯ ಸನ್ನಿ ಧಿಯಲ್ಲಿ ಬಳ್ಳಾರಿಯ ಮುಸ್ಲಿಂ ಕುಟುಂಬವೊಂದು ಕಳೆದ ಹಲವು ವರ್ಷಗಳಿಂದ ವರ್ಷ ಕ್ಕೊಮ್ಮೆ ಚಂಡಿಕಾಹೋಮ ನೆರವೇರಿಸುವ ಮೂಲಕ ಗಮನ ಸೆಳೆದಿದೆಯಲ್ಲದೇ ಭಕ್ತಿ, ಶ್ರದ್ಧೆಯಿಂದ ಈ ಸೇವೆಯನ್ನು ನೀಡುತ್ತಿದೆ.

ಬಳ್ಳಾರಿ ಸನಿಹದ ಗ್ರಾಮವೊಂದರ ನಿವಾಸಿ ಗುತ್ತಿಗೆದಾರ ಎಚ್. ಇಬ್ರಾಹಿಂ, ಸಾಜುದ್ದೀನ್ ಹಾಗೂ ಜರೀನಾ ಅವರ ಕುಟುಂಬದವರು ಹಲವು ವರ್ಷಗಳಿಂದ ಕೊಲ್ಲೂರಿಗೆ ಆಗಮಿಸಿ ಶ್ರೀದೇವಿಯ ದರ್ಶನ, ವಿಶೇಷ ಪೂಜೆ ಮತ್ತು ಚಂಡಿಕಾಹೋಮ ನೆರವೇರಿಸುತ್ತಿದ್ದಾರೆ. ಹಿರಿಯರ ಸೇವೆ, ತಾಯಿ ಮೂಕಾಂಬಿಕೆಯ ಅನುಗ್ರಹದಿಂದಾಗಿ ಬದುಕಿನಲ್ಲಿ ಶ್ರೇಯಸ್ಸಾಗಿದೆ ಎಂಬ ನಂಬಿಕೆಯೊಂದಿಗೆ ಇದೀಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್ ಹಾಗೂ ಅವರ ಪತ್ನಿ ಮಕ್ಕಳು ಕಳೆದ 5 ವರ್ಷಗಳಿಂದ ವರ್ಷಕ್ಕೊಮ್ಮೆ ಇಲ್ಲಿ ಚಂಡಿಕಾಹೋಮ ನಡೆಸುತ್ತಿದ್ದಾರೆ.

ಎಲ್ಲಾ ದೇವರು ಕೂಡ ಒಂದೇ. ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡಿಕಾಹೋಮ ನಡೆಸುವ ಮೂಲಕ ಆತ್ಮಸಂತೃಪ್ತಿ ಹೊಂದಿದ್ದೇವೆ. ಕ್ಷೇತ್ರದಲ್ಲಿ ವಿಶೇಷ ಶಕ್ತಿ ಇದೆ. – ಮನ್ಸೂರ್, ಕೊಲ್ಲೂರು ದೇವಳದ ಭಕ್ತ

Exit mobile version