Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಕ್ರಿಕೆಟ್ ಪ್ರೋತ್ಸಾಹಕ ರಾಜೇಶ್ ಆಚಾರ್ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ಪೋರ್ಟ್ಸ್ ಕನ್ನಡ ವತಿಯಿಂದ ಕರ್ನಾಟಕ ರಾಜ್ಯ ಹಿರಿಯ ಕ್ರಿಕೆಟಿಗರ ಸಮಾಗಮ 40ರ ಮೇಲ್ಪಟ್ಟ ವಯೋಮಿತಿಯ ಕ್ರಿಕೆಟ್ ಹಿರಿಯ ಕ್ರಿಕೆಟಿಗರಾದ ದಿ. ಪ್ರತಾಪ್ ಚಂದ್ರ ಹೆಗ್ಡೆ ಸ್ಮರಣಾರ್ಥ ಲೆಜೆಂಡ್ಸ್ ಕಪ್ 2021 ಮೂರು ದಿನಗಳ ಕಾಲ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಬೈಂದೂರಿನ ಯುವ ಕ್ರಿಕೆಟ್ ಪ್ರೋತ್ಸಾಹಕ ರಾಜೇಶ್ ಆಚಾರ್ ಬೈಂದೂರು ಇವರನ್ನು ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರಿನ ಜ್ಯೋತಿಷಿ ಡಾ ಮಹೇಂದ್ರ ಭಟ್, ದಿವಂಗತ ಪ್ರತಾಪ್ ಚಂದ್ರ ಹೆಗ್ಡೆ ಅವರ ಧರ್ಮಪತ್ನಿ ವೇದಾವತಿ ಹೆಗ್ಡೆ ಸಂತೆಕಟ್ಟೆ, ಮಗಳು ಆರುಂಧತಿ ಪಿ ಹೆಗ್ಡೆ ಉಡುಪಿ, ಬೆಂಗಳೂರು ಕೆಪಿಸಿಸಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ, ಕುಂದಾಪುರ ಟಾರ್ಪೋಡೇಸ್ ಸಂಸ್ಥಾಪಕ ಗೌತಮ್ ಶೆಟ್ಟಿ, ಬನ್ನಂಜೆ ಪ್ಯಾರಡೈಸ್ ಶ್ರೀಧರ್ ಶೆಟ್ಟಿ, ಬೈಂದೂರು ವಿಕ್ರಂ ಕ್ರಿಕೆಟ್ ಕ್ಲಬ್ ಹಿರಿಯ ಆಟಗಾರ ಗಿರೀಶ್ ಬೈಂದೂರು, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಡಾ ಪ್ರಸನ್ನ ಕುಮಾರ್ ಬೆಂಗಳೂರು, ವಿಶ್ವಕರ್ಮ ಕಲಾ ಸಂಗಮ ಫೇಸ್ ಬುಕ್ ಬಳಗದ
ಮುಖ್ಯಸ್ಥ ಎಚ್ ಸುಶಾಂತ್ ಆಚಾರ್ ಬೈಂದೂರು, ಭಾಸ್ಕರ್ ಆಚಾರ್ಯ ಕೋಟ, ಬಿಲ್ಲಾಡಿ ನಾಗರಾಜ್ ಆಚಾರ್, ಸ್ಪೋರ್ಟ್ಸ್ ಕನ್ನಡ ಅಂತರ್ಜಾಲದ ಪ್ರವರ್ತಕ ಕೋಟ ರಾಮಕೃಷ್ಣ ಆಚಾರ್ಯ ಇದ್ದರು.

Exit mobile version