Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯದಲ್ಲಿ ಹಾಫ್ ಲಾಕ್‌ಡೌನ್ ಘೋಷಣೆ. ಹೊಸ ಮಾರ್ಗಸೂಚಿಯಲ್ಲೇನಿದೆ ನೋಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಫ್ ಲಾಕ್ಡೌನ್ ಘೋಷಣೆಯಾಗಿದೆ. ಅಗತ್ಯ ಸೇವೆ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಇಂದು (ಎ.22) ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ರಾತ್ರಿ 9 ಗಂಟೆಯವರೆಗೆ ಯಾವೆಲ್ಲ ಅಂಗಡಿಗಳು ತೆರೆದಿರಬೇಕು ಎಂಬುದರ ಬಗ್ಗೆ ತಿಳಿಸಿದೆ. ಹೊಸ ಆದೇಶ ಮೇ 4ರವರೆಗೆ ಜಾರಿಯಲ್ಲಿರಲಿದೆ.

ನಿರ್ಬಂಧಿಸಲಾದ ಚಟುವಟಿಕೆಗಳು: ಎಲ್ಲಾ ಸಿನೆಮಾ ಹಾಲ್ಗಳು, ಶಾಪಿಂಗ್ ಮಾಲ್ಗಳು, ಜಿಮ್ ಗಳು , ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಾ, ಈಜುಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್ ,ಚಿತ್ರಮಂದಿರಗಳು, ಬಾರ್ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ಗಳು ಮತ್ತು ಅಂತಹುದೇ ಸ್ಥಳಗಳು ಮುಚ್ಚಲ್ಪಡುತ್ತವೆ.

ಯಾರಿಗೆಲ್ಲ ಅನುಮತಿ?/ಕುಂದಾಪ್ರ ಡಾಟ್ ಕಾಂ/ 
ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು
1) ಪಡಿತರ ಅಂಗಡಿಗಳು (ಪಿಡಿಎಸ್)ಸೇರಿದಂತೆ ಆಹಾರ ಮತ್ತು ದಿನಸಿ ಅಂಗಡಿಗಳು , ಹಣ್ಣುಗಳು ಮತ್ತು ತರಕಾರಿ ಅಂಗಡಿಗಳು, ಡೈರಿ ಮತ್ತು ಹಾಲಿನ ಬೂತ್ಗಳು, ಮಾಂಸ ಮತ್ತು ಮೀನು, ಪಶು ಆಹಾರ ಅಂಗಡಿಗಳನ್ನು ತೆರೆಯಲು ಅವಕಾಶ ಇರುತ್ತದೆ.
2) ಸಗಟು ತರಕಾರಿ / ಹಣ್ಣು / ಹೂವಿನ ಮಾರುಕಟ್ಟೆಗಳು ಕೋವಿಡ್ 19 ಬಗ್ಗೆ ಸರ್ಕಾರದ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಷರತ್ತಿಗೊಳಪಟ್ಟು ತೆರೆದ ಸ್ಥಳ / ಆಟದ ಮೈದಾನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.ಈ ಬಗ್ಗೆ ಸಾಗಟದ ಪ್ರಕ್ರಿಯೆಯನ್ನು 23 ‘ಏಪ್ರಿಲ್ ಒಳಗೆ ನಿರ್ವಹಿಸತಕ್ಕದ್ದು.
3) ರೆಸ್ಟೋರೆಂಟ್ ಮತ್ತು ಕೆಫೆಗಳಲ್ಲಿ ಸಾರ್ವಜನಿಕರಿಗೆ ಉಪಹಾರಗಳನ್ನು ಸೇವಿಸಲು ಅವಕಾಶ ಇರುವುದಿಲ್ಲ ,ಪಾರ್ಸೆಲ್ ಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.
4) ಲಾಡ್ಜಿಂಗ್ /ವಸತಿ ಗೃಹಗಳಲ್ಲಿ ಇರುವ ಹೊಟೇಲ್ ಗಳಲ್ಲಿ ಅಲ್ಲಿ ಉಳಿದುಗೊಂಡಿರುವ ಅತಿಥಿಗಳಿಗೆ ಮಾತ್ರ ಆಹಾರ ಸರಬರಾಜು ಮಾಡಲು ಅವಕಾಶ ಇರುತ್ತದೆ.
5) ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು / ಬಾರ್ & ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ ಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.
6) ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ಕಲ್ಪಿಸಲಾಗಿದೆ.
7) ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗೆ ಅನುಮತಿ ಕಲ್ಪಿಸಲಾಗಿದೆ.
8) ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅನುಮತಿಸಲಾಗಿದೆ.
9) ಇ-ಕಾಮರ್ಸ್ ಮೂಲಕ ಎಲ್ಲಾ ವಸ್ತುಗಳನ್ನು ಸರಬರಾಜು ಮಾಡಲು ಅನುಮತಿ ಕಲ್ಪಿಸಲಾಗಿದೆ.
10) ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ ಅನುಮತಿಸಲಾದ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳಿಗೆ ಅವಕಾಶವಿರುತ್ತದೆ.
11) ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳಿಗೆ ಅವಕಾಶವಿರುತ್ತದೆ.
12) ಖಾಸಗಿ ಭದ್ರತಾ ಸೇವೆಗಳನ್ನು ಅನುಮತಿಸಲಾಗಿದೆ.
13) ಕ್ಷೌರ ಅಂಗಡಿಗಳು / ಸಲೂನ್ / ಬ್ಯೂಟಿ ಪಾರ್ಲರ್ಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಕೋವಿಡ್ 19 ಬಗ್ಗೆ ಸರ್ಕಾರದ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿಸಿದೆ.
14) ನಿರ್ಮಾಣ ಸಾಮಗ್ರಿಗಳ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳನ್ನು ತೆರೆಯಲು ಅನುಮತಿಸಲಾಗಿದೆ.

ಮೇಲೆ ತಿಳಿಸಿದ ಅಂಗಡಿಗಳನ್ನು ಹೊರತುಪಡಿಸಿ ,ಎಲ್ಲಾ ಅಂಗಡಿಗಳು / ವಾಣಿಜ್ಯ / ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ . ಎಲ್ಲಾ ಸಂಸ್ಥೆಗಳು, ಸಂಸ್ಥೆಯ ನೌಕರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ದತಿಯನ್ನು ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. /ಕುಂದಾಪ್ರ ಡಾಟ್ ಕಾಂ/

 

Exit mobile version