Kundapra.com ಕುಂದಾಪ್ರ ಡಾಟ್ ಕಾಂ

ಮೇ 9ರಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ/ ಕಾರ್ಯಕಾರಿ ಮಂಡಳಿ ಚುನಾವಣೆಯು ದಿನಾಂಕ ಮೇ 9 ರಂದು ಉಡುಪಿ ಜಿಲ್ಲೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರು ಹಾಗೂ ಕೇಂದ್ರ ಅಧ್ಯಕ್ಷರ ಚುನಾವಣೆಯನ್ನು ನಡೆಸಲಾಗುತ್ತದೆ, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಕೆ.ಎಸ್ ಸುಬ್ರಹ್ಮಣ್ಯ ಬಾಸ್ರಿ ಇಂದ್ರಾಳಿ ಉಡುಪಿ, ಸುಬ್ರಹ್ಮಣ್ಯ ಭಟ್ ಬೈಂದೂರು ತಾಲೂಕು, ನೀಲಾವರ ಸುರೇಂದ್ರ ಅಡಿಗ ಮಣೂರು ಗ್ರಾಮ ಉಡುಪಿ ಈ ಮೂರು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 8 ಮತಗಟ್ಟೆ ಕೇಂದ್ರಗಳಿದ್ದು 1987 ಮತದಾರರಿರುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವವರು ಮತದಾರರಾಗಿದ್ದು, ಮತದಾರ ಪಟ್ಟಿಗಳನ್ನು ಮತಗಟ್ಟೆವಾರು ಈಗಾಗಲೇ ತಯಾರಿಸಲಾಗಿದೆ. ಮತದಾರರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಡೆದ ಅಭ್ಯರ್ಥಿಗಳ ಗುರುತು ಚೀಟಿ ಅಥವಾ ಭಾರತದ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳಲ್ಲಿ ಯಾವುದಾದರು ಒಂದನ್ನು ಹಾಜರು ಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ.

ಮತದಾನವು ದಿನಾಂಕ ಮೇ 9ರಂದು ಬೆಳಗ್ಗೆ 8ರಿಂದ ಪ್ರಾರಂಭವಾಗಿ ಮಧ್ಯಾಹ್ನ 4 ಗಂಟೆಯವರೆಗೆ ನಡೆಯಲಿದೆ. ಸಾಮಾನ್ಯ ಮತದಾರರಿಗೆ ಬೆಳಗ್ಗೆ 8 ರಿಂದ 3 ಗಂಟೆಯವರೆಗೆ ಅವಕಾಶವಿದ್ದು, ಕೋವಿಡ್-19 ಸೋಂಕಿತ ಮತದಾರರು ಇದ್ದಲ್ಲಿ ಅಂತಹ ಮತದಾರರರಿಗೆ ಮತದಾನ ಮುಕ್ತಾಯಗೊಳ್ಳುವ ಒಂದು ಗಂಟೆ ಮುಂಚಿತವಾಗಿ ಅಂದರೆ 3 ರಿಂದ 4 ಗಂಟೆಯವರೆಗೆ ಅವಕಾಶವಿರುತ್ತದೆ.

ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮತಕೇಂದ್ರಗಳಲ್ಲಿ ಕೋವಿಡ್ ಸೋಂಕಿತ ಇರುವ ಮತದಾರರಿಂದ ಬೇಡಿಕೆ ಪತ್ರ ಪಡೆದು ಮತದಾನ ಸಂದಂರ್ಭದಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲಿಸಿ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ಮತದಾನ ಮಾಡಬೇಕು ಮತದಾನ ಮುಗಿದ ಕೂಡಲೇ ಆಯಾ ಮತಗಟ್ಟೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಹೆಚ್ಚಿನ ವಿವರವನ್ನು ಆಯಾ ತಾಲೂಕು ತಹಶೀಲ್ದಾರ್ ಮತ್ತು ಉಡುಪಿ ತಾಲೂಕು ಕಛೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಕ.ಸಾ.ಪ ಚುನಾವಣಾಧಿಕಾರಿಯಾದ ಉಡುಪಿ ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

Exit mobile version