Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಉದ್ಯಮಿ ಪ್ರಭು ಆರ್ಥರ್ ಪಿರೇರಾ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಮೀಪದ ಪಡುಕೋಣೆಯ ಉದ್ಯಮಿ ಪ್ರಭು ಆರ್ಥರ್ ಪಿರೇರಾ (53) ಎ. 25ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಾಡಾ ಗುಡ್ಡೆಯಂಗಡಿಯಲ್ಲಿ ಲೇಟೆಸ್ಟ್ ಸಾಫ್ಟ್ ಡ್ರಿಂಕ್ಸ್ ಉದ್ಯಮವನ್ನು ಹೊಂದಿದ್ದ ಅವರು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭು ಕೆನಡಿ ಪಿರೇರಾ ಅವರ ಸಹೋದರರಾಗಿದ್ದ ಅವರು ತಂದೆ, ತಾಯಿ, ಮೂವರು ಸಹೋದರರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪಡುಕೋಣೆ ಇಗರ್ಜಿಯಲ್ಲಿ ಮೃತರಅಂತಿಮ ವಿಧಿಯನ್ನು ನೆರವೇರಿಸಲಾಗಿದೆ.

Exit mobile version