Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯ ಇನ್ವರ್ಟರ್ ಬ್ಯಾಟರಿ ಖರೀದಿಗೆ ದೇಣಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ಇನ್ವರ್ಟರ್ ಬ್ಯಾಟರಿ ಕೊಳ್ಳಲು ಅಗತ್ಯವಿದ್ದ ಮೊತ್ತವನ್ನು ಉಪ್ಪುಂದದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇಣಿಗೆಯಾಗಿ ನೀಡಲಾಯಿತು.

ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಆಡಳಿತ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಟ್ರಸ್ಟ್ ವತಿಯಿಂದ ರೂ.50,000 ಚೆಕ್ಕನ್ನು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಆನಂದ ಕಾಯ್ಕಿಣಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಪಿಎಸ್ಐ ಸಂಗೀತಾ ಅವರು ಉಪಸ್ಥಿತರಿದ್ದರು.

Exit mobile version