Kundapra.com ಕುಂದಾಪ್ರ ಡಾಟ್ ಕಾಂ

ಕೊಟೇಶ್ವರ ಶ್ರೀ ರಾಮ ಸಂಘದ ವತಿಯಿಂದ ಲಾಕ್‌ಡೌನ್ ಅವಧಿಯಲ್ಲಿ ಉಚಿತ ಉಪಹಾರದ ವ್ಯವಸ್ಥೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕೊಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಳದ ಶ್ರೀ ರಾಮ ಸಂಘದ ವತಿಯಿಂದಲಾಕ್‌ಡೌನ್ ಹಿನ್ನಲೆಯಲ್ಲಿ ಕರ್ತವ್ಯನಿರತ ಪೋಲಿಸ್ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿ, ಲಸಿಕೆ ವಿತರಣೆ ಕೇಂದ್ರದ ಸಿಬ್ಬಂದಿ ಹಾಗೂ ಸಂಕಷ್ಟದಲ್ಲಿರುವವರಿಗೆ ಉಚಿತ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ನಿತ್ಯವೂ ವಿವಿಧ ಬಗೆಯ ಉಪಹಾರವನ್ನು ತಯಾರಿಸಿ ಚೆನ್ನಾಗಿ ಪ್ಯಾಕ್ ಮಾಡಿ ನೀಡಲಾಗುತ್ತಿದ್ದು, ಜೊತೆಗೆ ಚಹಾದ ವ್ಯವಸ್ಥೆ ಮಾಡಲಾಗುತ್ತಿದೆ. ಕುಂದಾಪುರ, ಕೋಟೇಶ್ವರ ಮತ್ತು ಕುಂಭಾಶಿಯಲ್ಲಿ ಈ ಸೇವೆ ನೀಡುತ್ತಿದ್ದು ಲಾಕ್‌ಡೌನ್ ಮುಗಿಯುವ ತನಕ ಮುಂದುವರೆಯಲಿದೆ ಎಂದು ಶ್ರೀ ರಾಮ ಸಂಘದ ನಿರಂಜನ್ ಕಾಮತ್ ತಿಳಿಸಿದ್ದಾರೆ.

Exit mobile version