Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಸೊಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ: ಡಿಸಿ

ಕುಂದಾಪ್ರ ಡಾಟ್ ಕಾಂ’ ಸುದ್ದಿ.
ಉಡುಪಿ : ಕೊರೊನಾ ವೈರಸ್ ಸೋಂಕಿನಿಂದಾಗಿ ಉಡುಪಿಯಲ್ಲಿ ಪರಿಸ್ಥಿತಿ ದಿನೇ ದಿನೇ ಕೈಮೀರುತ್ತಿದೆ. ಬಹಳಷ್ಟು ಸಮಸ್ಯೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಸೊಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಸೋಂಕಿನ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಟೆಸ್ಟ್ ಮಾಡಿಸಿಕೊಂಡು ಐಸೋಲೇಟ್ ಆಗಿ. ಮನೆಯವರನ್ನು ಕೊರೊನಾ ಸೋಂಕಿನಿಂದ ರಕ್ಷಿಸಿ, ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಮನೆ ಮಂದಿ ಗೆಲ್ಲಾ ಸೋಂಕು ವ್ಯಾಪಿಸುತ್ತಿದೆ. ಹೊರಗಿನಿಂದ ಬರುವವರನ್ನು ಸಾಧ್ಯವಾದಷ್ಟು ದೂರವಿಡಿ. ಒಂದೊಮ್ಮೆ ಮನೆಗೆ ಹೊರಗಿನವರು ಬಂದ್ರೆ ಅವರನ್ನು ಪ್ರತ್ಯೇಕವಾಗಿ ಇರಲು ಹೇಳಿ. ಇಮ್ಯುನಿಟಿ ಕೊರತೆ ಇದ್ದವರನ್ನು ಬಹು ಬೇಗನೆ ಸೋಂಕು ಬಾಧಿಸುತ್ತಿದೆ. ಕೊರೊನಾ ಬಗ್ಗೆ ಜಾಗೃತೆ ವಹಿಸದೇ ಇದ್ರೆ, ಕೊರೊನಾ ಸೋಂಕಿನಿಂದ ಪಾರಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಜನರಲ್ಲಿ ಸಾಕಷ್ಟು ಬಾರಿ ಮನವಿಯನ್ನು ಮಾಡಲಾಗಿದೆ. ಸೋಂಕು ಕಾಣಿಸಿಕೊಂಡ ಕೂಡಲೇ ಟೆಸ್ಟ್ ಮಾಡಿಸಿಕೊಂಡು ಅಗತ್ಯಬಿದ್ರೆ ಆಸ್ಪತ್ರೆಗೆ ದಾಖಲಾಗುವ ಬದಲು, ಸೋಂಕು ಕಾಣಿಸಿಕೊಂಡು ಪರಿಸ್ಥಿತಿ ಬಿಗಡಾಯಿಸಿದ ನಂತರವೇ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳು ಭರ್ತಿಯಾಗಿದ್ದು, ಜನರು ನಿರ್ಲಕ್ಷ್ಯವನ್ನು ವಹಿಸಬಾರದು ಎಂದು ಅವರು ಮನವಿಯನ್ನು ಮಾಡಿದ್ದಾರೆ.

 

Exit mobile version