Site icon Kundapra.com ಕುಂದಾಪ್ರ ಡಾಟ್ ಕಾಂ

ಪಠ್ಯೇತರ ವಿಷಯ ಅವಗಣನೆ ಬೇಡ: ಕೆ ಬಾಬು ಶೆಟ್ಟಿ

ಕುಂದಾಪುರ: ಪಠ್ಯವಸ್ತುವಿನ ಕಲಿಕೆಯ ಜತೆಗೆ ಪಠ್ಯೇತರ ವಿಷಯಗಳ ಕಲಿಕೆಗೂ ಆದ್ಯತೆ ನೀಡಬೇಕು. ಎರಡರ ಸಮನ್ವಯದಿಂದ ಮಾತ್ರ ಸಮತೋಲನದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಮರವಂತೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ನಾವುಂದ ಸಮೂಹ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯವನ್ನು ಅವರು ಉದ್ಘಾಟಿಸಿ ಮಾತನಾಡಿದರು.

   ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ರಾಜು ಪೂಜಾರಿ ಪ್ರಸ್ತಾವನೆಗೈದರು. ಸಮೂಹ ಸಂಪನ್ಮೂಲ ವ್ಯಕ್ತಿ ಸುನಿಲ್‌ಕುಮಾರ ಶೆಟ್ಟಿ ವಂದಿಸಿದರು. ಗಣೇಶ ಶೆಟ್ಟಿ ನಿರೂಪಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರಾದ ಪ್ರಭಾಕರ ಖಾರ್ವಿ, ನಾಗರಾಜ ಖಾರ್ವಿ, ದೈಹಕ ಶಿಕ್ಷಕರ ಜಿಲ್ಲಾ ಸಂಘದ ಉಪಾಧ್ಯಕ್ಷ ಅರುಣಕುಮಾರ ಶೆಟ್ಟಿ, ತಾಲೂಕು ಸಂಘದ ಅಧ್ಯಕ್ಷ ರವಿಶಂಕರ ಹೆಗ್ಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

Exit mobile version