Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ: ಕೋವಿಡ್ ಲಸಿಕೆ ವಿತರಣೆ ತಾತ್ಕಾಲಿಕ ಸ್ಥಗಿತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಮೇ 14 ರಿಂದ ಮುಂದಿನ ಆದೇಶದವರೆಗೆ 18-44 ವಯೋಮಿತಿಯವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಸರ್ಕಾರದ ಆದೇಶದನ್ವಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮೇ 14 ರಿಂದ 17 ರ ವರೆಗೆ ಈಗಾಗಲೇ ಲಸಿಕೆ ಪಡೆದುಕೊಳ್ಳಲು ಲಸಿಕೆ ಶೆಡ್ಯೂಲ್ ನಿಗಧಿಪಡಿಸಿಕೊಂಡಿರುವವರಿಗೆ ಸಹ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮುಂದಿನ ಸೂಚನೆವರೆಗೆ ಲಸಿಕಾ ಸ್ಥಳಕ್ಕೆ ಆಗಮಿಸಬಾರದು.

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಪ್ರಥಮ ಡೋಸ್ ನೀಡುವುದನ್ನು ಸರ್ಕಾರದ ಆದೇಶದನ್ವಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ 2 ನೇ ಡೋಸ್ ನೀಡುವದನ್ನು ಸಹ ಮೇ 14 ರಿಂದ ಮುಂದಿನ ಸೂಚನೆವರೆಗೆ ಸ್ಥಗಿತಗೊಳಿಸಿದ್ದು, ಲಸಿಕೆ ಲಭ್ಯತೆ ಹಾಗೂ ದಿನಾಂಕದ ಕುರಿತು ಪತ್ರಿಕಾ ಪ್ರಕಟಣೆ ನೀಡಲಾಗುವುದು, ಸಾರ್ವಜನಿಕರು ಸಹಕರಿಸುವಂತೆ ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version