Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಭಾರಿ ಗಾಳಿಯಿಂದಾಗಿ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ಹೊರಾಂಗಣಕ್ಕೆ ಹಾನಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದೊಂದು ದಿನದಿಂದ ತೌಕ್ತೇ ಚಂಡಮಾರುತದ ಪರಿಣಾಮ ಉಂಟಾಗಿರುವ ಭಾರಿ ಗಾಳಿ ಮಳೆಯಿಂದಾಗಿ ಬೈಂದೂರು ರೈಲ್ವೆ ನಿಲ್ದಾಣದ ಸಮೀಪದ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನ ಹೊರಭಾಗಕ್ಕೆ ಹಾನಿಯುಂಟಾಗಿದೆ.

ಶನಿವಾರ ರಾತ್ರಿ ಬೀಸಿದ ಗಾಳಿಗೆ ಹೋಟೆಲ್ ಎದುರಿಸಿ ಎಸಿಬಿ ಶೀಟ್‌ಗಳು, ಕಿಟಿಕಿ, ಮೇಲ್ಬಾಗದ ಶೀಟ್, ಫ್ಯಾನ್ ಸೇರಿದಂತೆ ಕೆಲವು ವಸ್ತುಗಳು ಛಿದ್ರಗೊಂಡಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿರಬಹುದೆಂದು ಮಾಲಕರಾದ ಜಯಾನಂದ ಹೋಬಳಿದಾರ್ ತಿಳಿಸಿದ್ದಾರೆ.

Exit mobile version