Site icon Kundapra.com ಕುಂದಾಪ್ರ ಡಾಟ್ ಕಾಂ

ಪಿಕ್‌ಅಪ್‌ ವ್ಯಾನ್‌ಗೆ ಬಸ್ ಹಿಂದಿನಿಂದ ಢಿಕ್ಕಿ

ಕುಂದಾಪುರ: ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಹಾದ್ವಾರದ ಎದುರು ರಾ.ಹೆ 66ರಲ್ಲಿ ರಾಜ್ಯ ಸರಕಾರಿ ಬಸ್ಸೊಂದು ಪಿಕ್‌ಅಪ್‌ ವ್ಯಾನ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ವ್ಯಾನ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಆಯಾ ತಪ್ಪಿ ಬಿದ್ಧ ಘಟನೆ ನಡೆದಿದೆ.

ಬಸ್ಸು ಧರ್ಮಸ್ಥಳದಿಂದ ಶಿರಸಿ ಕಡೆಗೆ ಸಾಗುತ್ತಿದ್ದು, ವ್ಯಾನ್‌ ಕುಂಭಾಸಿಯಿಂದ ಕುಂದಾಪುರಡೆಗೆ ಸಾಗುತ್ತಿತ್ತು. ಪಿಕ್‌ಅಪ್‌ ವ್ಯಾನ್‌ಗೆ ಹಿಂದಿನಿಂದ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ವ್ಯಾನ್‌ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಆಯಾ ತಪ್ಪಿ ಬಿದ್ದಿದೆ. ಘಟನೆಯ ತೀವ್ರತೆಗೆ ವ್ಯಾನ್‌ ನುಜ್ಜುಗುಜ್ಜಾಗಿದೆ.

ಘಟನೆಯ ತೀವ್ರತೆಗೆ ವ್ಯಾನ್‌ ನೇರವಾಗಿ ಬಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ತುಂಡಾಗಿದ್ದು ಹಾಗು ಜನ ನಿಬಿಡ ಪ್ರದೇಶವಾದ್ದರಿಂದ ಸಂಭವನಿಯ ಭಾರೀ ಅಪಘಾತವೊಂದು ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Exit mobile version