Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರೋಜರಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಾಸ್ಕಲ್ ಡಿಸೋಜಾ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮೇ.16: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಂಗೀತಗಾರ ಫಾಸ್ಕಲ್ ಡಿಸೋಜಾ (53ವ) ನಿಧನರಾದರು.

ಕಳೆದ 27 ವರ್ಷಗಳಿಂದ ಕುಂದಾಪುರ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವಸಲ್ಲಿಸುತ್ತಿದ್ದರು. ಸಂಗೀತಗಾರರಾಗಿ ಗುರುತಿಸಿಕೊಂಡಿದ್ದ ಅವರು ಹಲವಾರು ಗೀತೆಗಳನ್ನು ರಚಿಸಿ ಆಲ್ಬಂ ಹೊರತಂದಿದ್ದರು. ಕೊಂಕಣಿ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ್ದರು. ಸುದೀರ್ಘ ಕಾಲ ಕುಂದಾಪುರ ಚರ್ಚಿನಲ್ಲಿ ಭಕ್ತಿಗಾಯನಗಳಿಗೆ ಸಂಗೀತ ನೀಡಿ ಅಮೂಲ್ಯ ಸೇವೆ ನೀಡಿದ್ದರು. ಮೃತರು ಪತ್ನಿ ವಿನೀತಾ, ಪುತ್ರಿ ಪ್ರಮೀತಾ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Exit mobile version