ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಸಮೀಪ ಕಳುವಿನ ಬಾಗಿಲು ಬಳಿ ಹೊಳೆ ನೀರು ಉಕ್ಕಿ ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ಹಾಗೂ ಪರಿಸರದ ನಿವಾಸಿಗಳಿಗೆ ಅಪಾಯಕಾರಿಯಾಗಿ ಆತಂಕ ನಿಮಾ೯ಣವಾಗಿದೆ.
ಉಪ್ಪುಂದ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಪೂವ೯ ದಿಕ್ಕಿನಲ್ಲಿರುವ ಕಳುವಿನ ಬಾಗಿಲು ಬಳಿ ಹೊಳೆಯ ಕಿನಾರೆಗೆ ಶಿಲೆ ಕಲ್ಲಿನ ರಿವೀಟ್ ಮೆಂಟ್ ಅಭಿವೃದ್ಧಿ ಕಾಮಗಾರಿ ಮಾಡುವುದರ ಮೂಲಕ ಸ್ಥಳೀಯ ನಿವಾಸಿಗಳ ಮನೆಗಳಿಗೆ ಮಳೆಗಾಲದ ನೆರೆ ಹಾವಳಿಯಿಂದಾಗಿ ಎದುರಾಗುವ ಅಪಾಯವನ್ನು ತಪ್ಪಿಸಲು ಕ್ರಮವಹಿಸ ಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘ(ಎಐಎಡಬ್ಲೂಯು)ದ ಜಿಲ್ಲಾ ಪ್ರಧಾನ ಕಾಯ೯ದಶಿ೯ ಕೋಣಿ ವೆಂಕಟೇಶ್ ನಾಯಕ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.