Kundapra.com ಕುಂದಾಪ್ರ ಡಾಟ್ ಕಾಂ

ಮನೆ ಸಮೀಪದ ಅಂಗಡಿಗಳಲ್ಲೇ ಅಗತ್ಯ ವಸ್ತು ಖರೀದಿಸಿ, ಇಲ್ಲವೇ ಕ್ರಮ ಎದುರಿಸಿ: ಉಡುಪಿ ಡಿಸಿ ವಾರ್ನಿಂಗ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ, ಮೇ.18: ಸಾರ್ವಜನಿಕರು ದಿನನಿತ್ಯದ ಅಗತ್ಯ ದಿನಸಿ ವಸ್ತುಗಳು, ತರಕಾರಿ, ಮತ್ತು ಮೀನುಗಳನ್ನು ತಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ಖರೀದಿಸಬೇಕು. ಮೇ.19ರಿಂದ ಅನಗತ್ಯವಾಗಿ ವಾಹನಗಳಲ್ಲಿ ಬಂದು ವಸ್ತುಗಳನ್ನು ಖರೀದಿಸಿದರೆ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದ್ದು, ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ಕುಂದಾಪುರ ಪೊಲೀಸರು ಈಗಾಗಲೇ ಪ್ರಕಟಣೆ ಹೊರಡಿಸಿದ್ದು, ದಿನಸಿ ಖರೀದಿಗೆ ವಾಹನಗಳ ಮೂಲಕ ತಲ್ಲೂರು, ಕೋಟೇಶ್ವರ ಹಾಗೂ ಇತರೆ ಗ್ರಾಮದವರು ಕುಂದಾಪುರ ನಗರಕ್ಕೆ ಬರುವಂತಿಲ್ಲ. ಸ್ಥಳೀಯ ಅಂಗಡಿಯಲ್ಲಿಯೇ ಅಗತ್ಯ ವಸ್ತು ಖರೀದಿಸಿ. ಅನಗತ್ಯವಾಗಿ ವಾಹನದಲ್ಲಿ ಬಂದರೆ ವಾಹನ ಸೀಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Exit mobile version