Site icon Kundapra.com ಕುಂದಾಪ್ರ ಡಾಟ್ ಕಾಂ

ಜೋತುಬಿದ್ದ ವಿದ್ಯುತ್ ತಂತಿಗೆ ವ್ಯಕ್ತಿಯ ಕತ್ತು ಸಿಲುಕಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೇರೂರು ಗ್ರಾಮದ ರಾಗಿಹಕ್ಲು ಕ್ರಾಸ್ ಬಳಿ ಮೆಸ್ಕಾಂ ಗುತ್ತಿಗೆದಾರರು ವಿದ್ಯುತ್ ಮಾರ್ಗ ದುರಸ್ತಿ ಮಾಡುತ್ತಿದ್ದ ವೇಳೆ ರಸ್ತೆಗೆ ಅಡ್ಡವಾಗಿ ಜೋತುಬಿದ್ದ ತಂತಿಗೆ, ಬೈಕ್‌ನಲ್ಲಿ ಬಂದ ವ್ಯಕ್ತಿಯ ಕತ್ತು ಸಿಲುಕಿ ಅವರು ಸ್ಥಳದಲ್ಲೇ ಮೃತರಾದರು. ಹೇರೂರು ಗ್ರಾಮದ ಯರುಕೋಣೆ ಆಲಗದ್ದೆ ನಿವಾಸಿ ಮರತೂರು ಶೇಖರ ಶೆಟ್ಟಿ (68) ಮೃತ ವ್ಯಕ್ತಿ.

ಶನಿವಾರ ರಾತ್ರಿ ಬಂದ ಗಾಳಿಮಳೆಯಿಂದ ಮರ ಬಿದ್ದು ಇಲ್ಲಿನ ಎರಡು ಕಂಬಗಳು ತುಂಡಾಗಿದ್ದುವು. ಸೋಮವಾರ ಮೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ದುರಸ್ತಿ ಕೆಲಸ ಮಾಡಿಸುತ್ತಿದ್ದಾಗ, ಕೆಲಸಗಾರರು ಸ್ಥಳದಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸದೆ ನಿರ್ಲಕ್ಷ್ಯ ತೋರಿದ ಕಾರಣ ಒಂದು ತಂತಿ ಜೋತುಬಿತ್ತು. ಅದೇ ವೇಳೆಗೆ ಶೇಖರ ಶೆಟ್ಟಿ ಬಂದಿದ್ದು, ತಂತಿ ಅವರ ಕತ್ತಿಗೆ ಬಡಿದು, ಕತ್ತು ಮುರಿದು, ರಸ್ತೆಗೆ ಬಿದ್ದು ಮೃತರಾದರು. ಮೃತರ ತಮ್ಮ ಜಗನ್ನಾಥ ಶೆಟ್ಟಿ ಸಲ್ಲಿಸಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರಿಗೆ ಪತ್ನಿ, ವಿವಾಹಿತರಾದ ಮಗ ಮತ್ತು ಮೂವರು ಪುತ್ರಿಯರು ಇದ್ದಾರೆ.

Exit mobile version