Kundapra.com ಕುಂದಾಪ್ರ ಡಾಟ್ ಕಾಂ

ಸ್ವರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಇತರರ ರಕ್ಷಣೆಗೂ ನೆರವಾಗಿ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಕುಂದಾಪುರ ವಿಧಾನಸಭಾ ಕ್ಷೇತ್ರ ಮಟ್ಟದ ಸಭೆ ಸೋಮವಾರ ನಡೆಯಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ , ಜನರು ಜವಾಬ್ದಾರಿಯಿಂದ ವರ್ತಿಸಬೇಕು. ಜನರು ಸ್ವರಕ್ಷಣೆ ಮಾಡಿಕೊಳ್ಳುವುದರ ಜತೆಗೆ ಇತರರ ರಕ್ಷಣೆಗೆ ನೆರವಾಗಬೇಕು, ಕುಂದಾಪುರ ವಿಧಾನಸಭಾ ಕ್ಷೇತ್ರದ 37 ಗ್ರಾಮ ಪಂಚಾಯಿತಿ 1 ಪಟ್ಟಣ ಪಂಚಾಯಿತಿ ಮತ್ತು 1 ಪುರಸಭೆ ವ್ಯಾಪ್ತಿಯಲ್ಲಿ ಮೊಬೈಲ್ ಯೂನಿಟ್ ಘಟಕ ಸಂಚರಿಸಲು ಅನುಕೂಲವಾಗುವಂತೆ 19 ವಾಹನಗಳು ಬೇಕಾಗುತ್ತದೆ. ಈ ಬಗ್ಗೆ ಸರಕಾರಕ್ಕೆ ಬರೆಯಲಾಗುವುದು ಎಂದು ಹೇಳಿದರು.

ಬಳಿಕ ಸಭೆಯಲ್ಲಿ ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಮಾತನಾಡಿ, ಸರಕಾರಿ ನಿರ್ದೇಶನದಂತೆ ಕೋವಿಡ್ ಪರೀಕ್ಷೆಯ ಹಿನ್ನೆಲೆಯಲ್ಲಿ ಗ್ರಾಮಾಂತರದಲ್ಲಿ ಮೊಬೈಲ್ ಕ್ಲಿನಿಕ್ ಯೂನಿಟ್ ಸಂಚರಿಸಲಿದೆ. ಪ್ರತಿಯೊಬ್ಬರು ಕೋವಿಡ್ ಪರಿಕ್ಷೇಗೆ ಒಳಪಟ್ಟು ಸೋಂಕು ಗೆಲ್ಲಲು ಪ್ರಯತ್ನಿಸಬೇಕು ಗ್ರಾಮಕ್ಕೆ ಒಂದು ಆಂಬ್ಯುಲೆನ್ಸ್ ನೀಡುವ ತೀರ್ಮಾನವನ್ನು ಸರಕಾರ ತೆಗೆದುಕೊಂಡಿದೆ. ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಕಾರ್ಯಪಡೆ ಜವಾಬ್ದಾರಿ ನಿರ್ವಹಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಎನ್ 95, ಪಿಇಟಿ ಕಿಟ್ ನೀಡಲಾಗುತ್ತದೆ. ನೆಗಡಿ, ಕೆಮ್ಮು ಇದ್ದವರು ಪರೀಕ್ಷೆಗೊಳಪಡಬೇಕು ರಿಸ್ಕ್ ಇದ್ದರೆ ಹೋಂ ಐಸೋಲೇಷನ್ ಸೆಂಟರ್‌ಗೆ ದಾಖಲಿಸುವ ಕಾರ್ಯ ಕೂಡ ನಡೆದಿದೆ ಪ್ರತಿದಿನ 3ರಿಂದ 4 ಹಳ್ಳಿಯನ್ನು ಮೊಬೈಲ್ ಯೂನಿಟ್ ಭೇಟಿ ಮಾಡಲಿದೆ ಎಂದರು.

708 ಮಂದಿ ದಾಖಲು: ಏಪ್ರೀಲ್‌ನಿಂದ ಈವರೆಗೆ ಕುಂದಾಪುರದ ಸರಕಾರಿ ಆಸ್ಪತ್ರೆಗೆ 708 ಮಂದಿ ದಾಖಲಾಗಿದ್ದಾರೆ. ಪ್ರಸ್ತುತ ಐಸಿಯೂ ಯೂನಿಟ್‌ನಲ್ಲಿ ೬ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಒಬ್ಬರು ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಕುಂದಾಪುರ ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ನಾಗೇಶ್ ಹೇಳಿದರು.

ಈ ಸಂದರ್ಭ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ, ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂಪಪದ್ಮನಾಭ, ಕುಂದಾಪುರ ತಾಲೂಕು ಪಂಚಾಯಿತಿ ಇಒ ಕೇಶವ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version