Site icon Kundapra.com ಕುಂದಾಪ್ರ ಡಾಟ್ ಕಾಂ

ಸಂಪೂರ್ಣ ಲಾಕ್‌ಡೌನ್ ಇರುವ ಗ್ರಾಮದವರಿಗೆ ಮೆಡಿಕಲ್ ಅಗತ್ಯಕ್ಕಷ್ಟೇ ಹೊರಬರಲು ಅವಕಾಶ: ಕುಂದಾಪುರ ಎಸಿ ರಾಜು ಕೆ.

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 50ಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಇರುವ ಗ್ರಾಮಗಳ ಸಂಪೂರ್ಣ ಲಾಕ್‌ಡೌನ್ ಮಾಡಲು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು ಜೂನ್ 2 ರಿಂದ7ರ ತನಕ ಹೆಚ್ಚಿನ ಕೋವಿಡ್ ಪಾಸಿಟಿವ್ ಇರುವ ಗ್ರಾಮಗಳು ಸಂಪೂರ್ಣ ಲಾಕ್‌ಡೌನ್ ಆಗಲಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರು ತಿಳಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂಗೆ ಈ ಬಗ್ಗೆ ಮಾಹಿತಿ ನೀಡಿದ ಅವರು ಮೆಡಿಕಲ್ ಹಾಗೂ ತುರ್ತು ಅಗತ್ಯಗಳಿದ್ದರೆ ಮಾತ್ರ ಈ ಗ್ರಾಮಗಳ ಜನರು ಹೊರಬರಲು ಅವಕಾಶವಿದ್ದು ಅದನ್ನು ಹೊರತುಪಡಿಸಿ ಬೇರಾವುದೇ ಕಾರಣಕ್ಕೆ ಹೊರಕ್ಕೆ ಬರುವಂತಿಲ್ಲ. ಹಾಲನ್ನು ಕೂಡ ಮನೆಗಳಿಗೆ ನೇರವಾಗಿ ವಿತರಿಸಲು ಸೂಚಿಸಲಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಜನರು ಉತ್ತಮ ಸಹಕಾರ ನೀಡುತ್ತಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿದೆ. ಇನ್ನು ಸ್ಪಲ್ವ ದಿನ ಹೀಗೆಯೇ ಸಹಕಾರ ನೀಡಿದರೆ ಕೋವಿಡ್ ಮುಕ್ತವಾಗಿ ಮಾಡಬಹುದು ಎಂದರು.

ಬೈಂದೂರು ತಾಲೂಕಿನ ಶಿರೂರು, ಜಡ್ಕಲ್, ಕಂಬದಕೋಣೆ, ನಾಡ ಗ್ರಾಮಗಳು ಹಾಗೂ ಕುಂದಾಪುರ ತಾಲೂಕಿನ ಕಾವ್ರಾಡಿ, ಹೊಂಬಾಡಿ ಮಂಡಾಡಿ, ಕೋಟೇಶ್ವರ, ಹಾಲಾಡಿ,ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು ಗ್ರಾಮಗಳು ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ.

 

Exit mobile version