Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಿಂದ ಕೊಲ್ಲೂರು – ನಿಟ್ಟೂರು ತನಕದ ರಸ್ತೆ ಅಭಿವೃದ್ಧಿಯ ಯೋಜನಾ ವರದಿ ತಯಾರಿಗೆ ಅನುಮೋದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 (ಅ)ಯನ್ನು ಬೈಂದೂರಿನಿಂದ ನಿಟ್ಟೂರಿನ ತನಕ ಅಭಿವೃದ್ಧಿಪಡಿಸಲು ಯೋಜನಾ ವರದಿ ತಯರಿಗೆ ಅನುದಾನ ನೀಡಿ ಅನುಮೋದನೆ ಮಾಡಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಬೈಂದೂರಿನಿಂತ ನಿಟ್ಟೂರು ತನಕ ಒಟ್ಟು 38.70 ಕಿ.ಮೀ ವರೆಗೆ ರಸ್ತೆ ಅಗಲೀಕರಣ, ಕೊಲ್ಲೂರು ಪಟ್ಟಣಕ್ಕೆ ಪಾಸ್ ರಸ್ತೆ ನಿರ್ಮಾಣ ಮತ್ತು ಕೊಲ್ಲೂರು ಘಾಟಿ ರಸ್ತೆಯ ಅಗಲೀಕರಣ ಒಳಗೊಂಡಂತೆ ದ್ವಿಪಥಕ್ಕಾಗಿ 10 ಮೀಟರ್ ಅಗಲದ ರಸ್ತೆ ನಿರ್ಮಾಣದ ಯೋಜನಾ ವರದಿ ತಯಾ ರೂ. 1.35 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ಪ್ರಗತಿಯಲ್ಲಿರುವ/ ಟೆಂಡರ್ ಅಂತಿಮ ಹಂತದಲ್ಲಿರುವ ಬೈಂದೂರು ರಾಣೆಬೆನ್ನೂರು ಹೆದ್ದಾರಿ ಕಾಮಗಾರಿ:
ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ನಾಗೋಡಿ ಬಳಿ ನದಿ ಪಕ್ಕದ ರಸ್ತೆ ಹಾಗೂ ಗುಡ್ಡ ಕುಸಿತ ಪರಿಣಾಮದಿಂದಾಗಿ ಹಾಳಾಗಿರುವ ರಸ್ತೆಯ ಭಾಗದಲ್ಲಿ ತಾಂತ್ರಿಕವಾಗಿ ನೂತನ ಗೇಬಿಯನ್ ತಡೆಗೋಡೆ ನಿರ್ಮಿಸಿ ಒಡೆದ ಕಾಂಕ್ರಿಟ್ ರಸ್ತೆಯ ಪುನರ್ ನಿರ್ಮಾಣ ಕೆಲಸದ ಕಾಮಗಾರಿಯ ರೂ.4.22 ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭಿಸಲಾಗಿದೆ.  ನಿಟ್ಟೂರು ಹೊಸನಗರ ಭಾಗದ ಶರಾವತಿ ಹಿನ್ನೀರಿನ ಜೊತೆ ಸಂಪರ್ಕವಿರುವ ಶಿಥಿಲಗೊಂಡಿರುವ 7 ಸೇತುವೆಗಳಿಗೆ ಬದಲಿಯಾಗಿ 12 ಮೀಟರ್ ಅಗಲದ ನೂತನ ಸೇತುವೆ ನಿರ್ಮಾಣಕ್ಕೆ ರೂ. 19.77 ಕೋಟಿಯ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ನಾಗೋಡಿ ಬಳಿಕ ಬಳಿ ಜಯನಗರದಿಂದ ಹೊಸನಗರದ ತನಕ, ಬಟ್ಟೆಮಲ್ಲಪ್ಪದಿಂದ ಯಡೇಹಳ್ಳಿ ತನಕ ಮತ್ತು ಶಿಕಾರಿಪುರ ಮಾಸೂರು ರಟ್ಟೆಹಳ್ಳಿಯ ಮತ್ತು ಹಲಗೇರಿ ಬಳಿಯ ಒಟ್ಟು 29.45 ಕಿಮೀ ಉದ್ದದ 10 ಮೀ ಅಗಲದ ದ್ವಿಪಥದ ರಸ್ತೆ ನಿರ್ಮಾಣಕ್ಕೆ 210 ಕೋಟಿ ರೂ ಅನುಮೋದನೆ, ಸಂಪೆಕಟ್ಟೆಯಿಂದ ಜಯನಗರದ ತನಕ ರಸ್ತೆಗೆ ಪರ್ಯಾಯವಾಗಿ ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ ಸೇತುವೆ ಮತ್ತು 16 ಕೀ.ಮೀ ಉದ್ದದ ದ್ವಿಪಥ ರಸ್ತೆ ನಿರ್ಮಾಣಕ್ಕೆ ರೂ.30 ಕೋಟಿ ಹಾಗೂ ಯೋಜನಾ ವರದಿ ತಯಾರಿಗೆ 0.56 ಕೋಟಿ ಅನುಮೋದನೆ ದೊರೆತಿದೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 2020-21 ಹಾಗೂ 2021-22ನೇ ಸಾಲಿನಲ್ಲಿ ಪ್ರಮುಖ ಕಾಮಗಾರಿಗಳಿಗೆ ಒಟ್ಟು 8,500 ಕೋಟಿ ರೂ. ಅನುದಾನ ಕೇಂದ್ರದಿಂದ ಮಂಜೂರಾಗಿದ್ದು, ಕೇಂದ್ರ ಭೂಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸುವುದಾಗಿ ಸಂಸದ ಬಿ. ವೈ. ರಾಘವೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:
► ಬೈಂದೂರು ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ – https://kundapraa.com/?p=48705 .

 

Exit mobile version