Kundapra.com ಕುಂದಾಪ್ರ ಡಾಟ್ ಕಾಂ

ಗುರು-ಶಿಷ್ಯ ಸಂಬಂಧಕ್ಕೆ ಬೆಲೆ ಕಟ್ಟಲಾಗದು: ಪಾರ್ವತಿ ಜಿ. ಐತಾಳ್

ಕುಂದಾಪುರ: ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯು ಗುರು-ಶಿಷ್ಯ ಸಂಬಂಧವನ್ನು ಶಿಥಿಲಗೊಳಿಸುತ್ತಿದೆಯೆಂದು ಎಷ್ಟೋ ಬಾರಿ ಅನ್ನಿಸುತ್ತದೆ. ಅಧ್ಯಾಪನ ವೃತ್ತಿ ಕೈಗೊಂಡ ನಂತರ ನಮ್ಮ ವಿದ್ಯಾರ್ಥಿಗಳು ನಮ್ಮ ಜತೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೇನೋ, ನಮ್ಮ ಬಗ್ಗೆ ಅವರಿಗೆ ಪ್ರೀತಿ-ಕೃತಜ್ಞತೆಗಳಂಥ ಭಾವನೆಗಳೇ ಇಲ್ಲವೇನೋ ಅನ್ನಿಸುತ್ತಿತ್ತು. ಆದರೆ ಇದು ಸುಳ್ಳು ಅಂತ ಅನ್ನಿಸುವ ಸನ್ನಿವೇಶಗಳು ಹಲವು ಬಾರಿ ಎದುರಾದದ್ದೂ ಇದೆ ಎಂದು ಭಂಡಾರ್‌ಕಾರ್ಸ್ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು.

ಅವರು ಇತ್ತಿಚಿಗೆ ಅವರದೇ ನಿವಾಸದಲ್ಲಿ ಪತಿ ಗಂಗಾಧರ ಐತಾಳರರೊಂದಿಗೆ ತಮ್ಮ ಹಳೆ ವಿದ್ಯಾರ್ಥಿಗಳಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

25 ವರ್ಷಗಳ ಹಿಂದೆ ಕುಂದಾಪುರದ ಸಂತಮೇರಿ ಪ್ರೌಢಶಾಲೆಯಲ್ಲಿ ಕಲಿತು ತೇರ್ಗಡೆಯಾಗಿ ಮುಂದೆ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ  ಶಿಕ್ಷಣವನ್ನು ಮುಂದುವರಿಸಿದ ಈ ವಿದ್ಯಾರ್ಥಿಗಳು ಈಗ ಬೆಂಗಳೂರು, ಹುಬ್ಬಳ್ಳಿ, ಕಾರವಾರ, ದುಬೈ, ಲಂಡನ್ ಮೊದಲಾದ ವಿವಿಧೆಡೆಗಳಲ್ಲಿ ನೆಲೆಸಿರುವ ಸುಮಾರು 25 ಮಂದಿ ಅವರ ವಿದ್ಯಾರ್ಥಿಗಳು ಪಾರ್ವತಿ ಜಿ. ಐತಾಳ್ ಅವರ ಸ್ವಗೃಹಕ್ಕೆ ಬಂದು ಸನ್ಮಾನಿಸಿದ್ದರು.

Exit mobile version