Site icon Kundapra.com ಕುಂದಾಪ್ರ ಡಾಟ್ ಕಾಂ

ದುಬೈನ ಉದ್ಯಮಿ ಕೇವಿನ್ ಲೂವಿಸ್ ಕೊಡಮಾಡಿದ ದಿನಸಿ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದುಬೈನ ಉದ್ಯಮಿ ಕೇವಿನ್ ಲೂವಿಸ್ ಕೊಡ ಮಾಡಿದ ಸುಮಾರು ೧.೨೦ ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಗುಜ್ಜಾಡಿ ಶ್ರೀ ರಾಮ ಮಂದಿರದಲ್ಲಿ ಶನಿವಾರ ವಿತರಿಸಲಾಯಿತು.

ಗುಜ್ಜಾಡಿ ಗ್ರಾಮದ ಕರೋನಾ ವಾರಿಯರ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ದಾದಿಯರಿಗೆ ಮತ್ತು ಗುಜ್ಜಾಡಿ ಗ್ರಾಮದ ಐದು ವಾರ್ಡಗಳ ಆಶಕ್ತ ಕುಟುಂಬಗಳಿಗೆ ಕೇವಿನ್ ಲೂವಿಸ್ ಕೊಡ ಮಾಡಿದ ಕಿಟ್‌ಗಳನ್ನು ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಕರೋನಾ ಹಾವಳಿಯಿಂದ ಅನೇಕ ಕುಟುಂಬಗಳು ಸಂಕಷ್ಟದಲ್ಲಿದೆ. ಕರೋನಾ ವಾರಿಯರ್ಸ್‌ಗಳು ಮತ್ತು ಆರೋಗ್ಯ ಸಿಬ್ಬಂದಿಗಳು ಹಗಲಿರುಳು ಕರೋನಾ ವಿರುದ್ಧ ಸೆಣಸಾಡುತ್ತಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ಗುಜ್ಜಾಡಿ ಗ್ರಾಮದ ಬಡ ಕುಟುಂಬಗಳಿಗೆ ದುಬೈ ಉದ್ಯಮಿ ಕೇವಿನ್ ಲೂವಿಸ್ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ಪುಣ್ಯದ ಕೆಲಸ ಎಂದರು.

ಈ ಸಂದರ್ಭದಲ್ಲಿ ಗುಜ್ಜಾಡಿ ಗ್ರಾಪಂ. ಅಧ್ಯಕ್ಷೆ ಯಮುನಾ ಪೂಜಾರಿ, ಉಪಾದ್ಯಕ್ಷ ರಾಜು ಪೂಜಾರಿ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸನ್ಮಾನ್ ಶೆಟ್ಟಿ, ರಾಮ ಮಂದಿರ ಹಾಲ್‌ನ ಮೇಲ್ವಿಚಾರಕ ಪ್ರದೀಪ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Exit mobile version