Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ಜೀವನ ಮೌಲ್ಯ ಶಿಕ್ಷಣ ಶಿಬಿರ

ಕುಂದಾಪುರ: ನಾವುಂದದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಅಲ್ಲಿನ ಮಹಾಗಣಪತಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ’ಪ್ರಸ್ತುತ ಜೀವನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.

ಉಪನಿಷತ್ತು ಮನುಷ್ಯರನ್ನು ಅಮೃತ ಪುತ್ರರು ಎಂದು ಪರಿಗಣಿಸಿದೆ. ಮನುಷ್ಯರು ಅದಕ್ಕೆ ಅರ್ಹವಾಗುವಂತೆ ಬದುಕಬೇಕಾದರೆ ನಮ್ಮ ಪರಂಪರೆಯಿಂದ ಬಂದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನ ಪಯಣದಲ್ಲಿ ಸುಲಭದ,

ಪತನದತ್ತ ಒಯ್ಯುವ ಜಾರುದಾರಿಯನ್ನು ಬಳಸದೆ, ಸವಾಲುಗಳಿಂದ ಕೂಡಿದ ಸಾಧನಾ ಮಾರ್ಗವಾದ ಏರುದಾರಿಯನ್ನು ಹಿಡಿಯಬೇಕು. ವಿದ್ಯಾರ್ಥಿಗಳು ಬೆಂಕಿಯ ಕಿಡಿಗಳಾಗದೆ ಬೆಳಕಿನ ಕುಡಿಗಳಾಗಬೇಕು ಎಂದು ಮುದ್ರಾಡಿ ಹೇಳಿದರು.

ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಅಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಕಾಂತಿ ಹೆಬ್ಬಾರ್ ಸ್ವಾಗತಿಸಿದರು, ಪ್ರಾಂಶುಪಾಲ ಎಸ್. ನಾರಾಯಣ ರಾವ್ ಪ್ರಸ್ತಾವನೆಗೈದರು. ಉಪನ್ಯಾಸಕಿ ಸುಮಲತಾ ಅತಿಥಿಯನ್ನು ಪರಿಚಯಿಸಿದರು. ರೇಣುಕಾ ನಿರೂಪಿಸಿದರು.

Exit mobile version