Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ರಾಜ್ಯ ಸರಕಾರದಿಂದ ‘ಎ’ ದರ್ಜೆಯ 50,000 ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳ ಸಿಬ್ಬಂದಿ ಹಾಗೂ ಅರ್ಚಕರಿಗೆ 1,500ರೂ. ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗುತ್ತಿದೆ ಹಾಗೂ ಎಲ್ಲ ಅರ್ಚಕರಿಗೆ ಲಾಕ್‌ಡೌನ್ ನಿಮಿತ್ತ ೩೦೦೦ರೂ. ಪ್ಯಾಕೇಜ್ ಒದಗಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವತಿಯಿಂದ ಏರ್ಪಡಿಸಲಾಗಿದ್ದ ಬಡತನ ರೇಖೆಗಿಂತ ಕೆಳಗಿರುವ ೫೫೦ಕ್ಕೂ ಮಿಕ್ಕಿ ಕೊಲ್ಲೂರು ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಸಚಿವರು ಜೂ.14ರ ನಂತರ ಲಾಕ್‌ಡೌನ್ ಹಂತ – ಹಂತವಾಗಿ ತೆರವುಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ದೇಗುಲಗಳು ತೆರೆಯುವ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಭಕ್ತರ ನೂಕು ನುಗ್ಗಲಿನಿಂದ ಮತ್ತೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದು ದೇಗುಲದ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಇಲಾಖೆಯ ಅಧಿಕಾರಿಗಳೊಡನೆ ಚರ್ಚೆ ನಡೆಯುತ್ತಿದೆ ಎಂದರು. ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಸಾಧಕ-ಭಾದಕ ಹಾಗೂ ಪ್ರಮಾಣದಲ್ಲಿನ ಇಳಿಕೆಯ ನಂತರ ದೇಗುಲದ ಪ್ರವೇಶಕ್ಕೆ ನಿರ್ಬಂಧ ಅನಿವಾರ್ಯ ಪ್ರತಿಯೋರ್ವರು ಎಚ್ಚರ ವಹಿಸಿ ಜಾಗೃತರಾದಲ್ಲಿ ಮಾತ್ರ ಕೊರೊನಾ ಮುಕ್ತ ಗ್ರಾಮವಾಗಿಸಬಹುದು ಎಂದರು.

ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಉಪಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯಕ್, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಗ್ರಾ.ಪಂ. ಅಧ್ಯಕ್ಷ ಶಿವರಾಮ ಕೃಷ್ಣ ಭಟ್, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ, ಗಣೇಶ್ ಕಿಣಿ ಬೆಳ್ವೆ, ಕೆ.ಪಿ ಶೇಖರ ಪೂಜಾರಿ, ಸಂಧ್ಯಾ ರಮೇಶ್, ರತ್ನಾ ಆರ್. ಕುಂದರ್ ಡಾ.ರಾಮಚಂದ್ರ ಅಡಿಗ, ಪಿಡಿಒ ರುಕ್ಕನ್ನ ಗೌಡ, ಗ್ರಾ.ಪಂ ಸದಸ್ಯರು, ದೇಗುಲದ ಅರ್ಚಕರು, ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version