Kundapra.com ಕುಂದಾಪ್ರ ಡಾಟ್ ಕಾಂ

ಪೆಟ್ರೋಲ್-ಡಿಸೆಲ್ ದರ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಜಾಗಟೆ ಭಾರಿಸಿ ‘100’ ನಾಟೌಟ್ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದಲೂ ಶನಿವಾರ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿಯವರ ಅವರ ನೇತೃತ್ವದಲ್ಲಿ ಬೈಂದೂರಿನ ಪೆಟ್ರೋಲ್ ಪಂಪ್ ಬಳಿ ಶನಿವಾರ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ 100ಕ್ಕೆ ಹಾಗೂ ಡಿಸೇಲ್ ಬೆಲೆ 94ಕ್ಕೆ ಏರಿಕೆ ಮಾಡಿರುವ ಮೋದಿ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕೇಂದ್ರ ಸರಕಾರ ಕೊರೋನಾ ಸಂಕಷ್ಟದಲ್ಲಿ ದರ ಇಳಿಸುವ ಕೆಲಸ ಮಾಡಬೇಕು. ಕೊರೋನಾದಿಂದ ಉದ್ಯೋಗವಿಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಉದ್ಯೋಗ, ಪರಿಹಾರ ಕೊಡಬೇಕು. ಮನೆಯಲ್ಲಿ ಕುಳಿತವರಿಗೆ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.

ಮನಮೋಹನ್ ಸಿಂಗ್ ಸರಕಾರ ಅಧಿಕಾರದಲ್ಲಿದ್ದಾಗ ಕಚ್ಛಾ ತೈಲದ ಬೆಲೆ ಡಾಲರ್ ಗೆ 100 ರಿಂದ 120 ರ ವರೆಗೆ ಇದ್ದಂತಹ ಸಂದರ್ಭದಲ್ಲಿ 75 – 76 ರೂ.ನಲ್ಲಿ ಪೆಟ್ರೋಲ್, 44 ರಿಂದ 46 ರೂ.ಬೆಲೆಯಲ್ಲಿ ಡೀಸೆಲ್ ಬೆಲೆ ಕೊಡುತ್ತಿದ್ದೆವು. ಮೋದಿ ಸರ್ಕಾರ ಬಂದ ಮೇಲೆ ಕಚ್ಚಾ ತೈಲ ಬೆಲೆ 75 ರಿಂದ 76 ರೂ. ಇದೆ. 2016 ರಲ್ಲಿ 40-45 ರೂ. ಕಚ್ಛಾ ತೈಲ ಬೆಲೆ ಇದ್ದಂತಹ ಸಂದರ್ಭದಲ್ಲಿ ಯಾವುದೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದೆ, ಹೆಚ್ಚು ಮಾಡುವ ಕೆಲಸ ಮಾಡಿದ್ದಾರೆ. 75-76 ರೂ. ಇರುವ ಸಂದರ್ಭದಲ್ಲಿ 100 ರೂ.ಗೆ ಹೆಚ್ಚಿಸಿರುವ ಕೆಲಸ ಮಾಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಗ್ಯಾಸ್ ಸಿಲಿಂಡರ್ ಬೆಲೆ 414 ರೂ. ಇತ್ತು. ಈಗ 800 ರಿಂದ 900 ತನಕ ಏರಿಕೆಯಾಗಿದೆ, 2020 ರ ನಂತರ ಸಬ್ಸಿಡಿಯನ್ನೂ ರದ್ದು ಮಾಡಲಾಗಿದೆ. ಇದು ಜನಸಾಮಾನ್ಯರಿಗೆ ಮಾಡಿದ ಅನ್ಯಾಯವೆಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್. ಮದನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಯುವ ಮುಖಂಡರುಗಳಾದ ಸುಬ್ರಹ್ಮಣ್ಯ ಪೂಜಾರಿ, ಜಗದೀಶ್ ದೇವಾಡಿಗ, ಸುರೇಶ್ ಹೋಬಳಿದಾರ್, ಶೇಖರ್ ಪೂಜಾರಿ ಉಪ್ಪುಂದ, ಮಹಾಬಲ ದೇವಾಡಿಗ, ಮಣಿಕಂಠ ದೇವಾಡಿಗ, ಮಂಜುನಾಥ ಪೂಜಾರಿ, ನಾಗೇಶ್ ಖಾರ್ವಿ, ತಿಮ್ಮಪ್ಪ ಖಾರ್ವಿ, ಶಾಂತಿ ಪೆರೇರಾ, ನಾಗಮ್ಮ, ಲಕ್ಷಣ್ ಬೈಂದೂರು, ಗುರುಪ್ರಸಾದ್, ಅಣ್ಣಪ್ಪ ಪೂಜಾರಿ, ಭಾಸ್ಕರ ಖಾರ್ವಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Exit mobile version