Site icon Kundapra.com ಕುಂದಾಪ್ರ ಡಾಟ್ ಕಾಂ

ಬಿಐಇಆರ್‌ಟಿ ಹುದ್ದೆ: ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2021-22ರ ಸಾಲಿನಲ್ಲಿ ಖಾಲಿ ಇರುವ ಪ್ರಾಥಮಿಕ ವಿಭಾಗದ ಬಿಐಇಆರ್‌ಟಿ ಹುದ್ದೆಗೆ ಅರ್ಹ ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷ ಚೇತನ ಮಕ್ಕಳ ಮನೆ-ಮನೆ ಭೇಟಿ ಮಾಡಿ ಬೋಧಿಸುವ ಮತ್ತು ಸಂಪನ್ಮೂಲ ಕೇಂದ್ರದಲ್ಲಿ ಬೋಧಿಸುವವರಿಗಾಗಿ ಇರುವ ಪ್ರಾಥಮಿಕ ವಿಭಾಗದ ಈ ಬಿಐಇಆರ್‌ಟಿ ಹುದ್ದೆಗೆ , ಶಿಕ್ಷಕ ತರಬೇತಿಯೊಂದಿಗೆ ವಿಶೇಷ ಡಿ. ಇಡಿ ಕಡ್ಡಾಯವಾಗಿರುತ್ತದೆ. ನಿವೃತ್ತರಿಗೆ ಅವಕಾಶವಿಲ್ಲ. ಆಸಕ್ತರು ಹತ್ತಿರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಜೂನ್ 21 ರಂದು ಮಧ್ಯಾಹ್ನ 12 ಗಂಟೆ ಒಳಗೆ ಅರ್ಜಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯುವಂತೆ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Exit mobile version